ಬೀದರ್:ಇಲ್ಲಿನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಎರಡು ದಿನದಿಂದ ರೆಮ್ಡಿಸಿವರ್ ಚುಚ್ಚು ಮದ್ದಿನ ಕೊರತೆ ಉಂಟಾಗಿದ್ದು, ಜನರ ಜೀವ ಹಾನಿಗೆ ಯಾರು ಜವಾಬ್ದಾರರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
286 ಸೋಂಕಿತರಿಗೆ ಚಿಕಿತ್ಸೆ ಕೊರತೆ, ಜನರ ಜೀವ ಹಾನಿಗೆ ಯಾರು ಹೊಣೆ: ಈಶ್ವರ ಖಂಡ್ರೆ ಪ್ರಶ್ನೆ
286 ಜನ ಸೋಂಕಿತರಿಗೆ ಚಿಕಿತ್ಸೆ ಕೊರತೆಯಾಗಿದ್ದು, ಜನರ ಜೀವ ಹಾನಿಗೆ ಯಾರು ಹೊಣೆ ಎಂದು ಈಶ್ವರ ಖಂಡ್ರೆ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಈಶ್ವರ ಖಂಡ್ರೆ ಪ್ರಶ್ನೆ
ಈ ಕುರಿತು ಸಚಿವರಾದ ಸುಧಾಕರ ಹಾಗೂ ಪ್ರಭು ಚವ್ಹಾಣ ಹೆಸರಿನಲ್ಲಿ ಸಾರ್ವಜನಿಕ ಪ್ರತ್ರ ಬಿತ್ತರಣೆ ಮಾಡಿದ್ದು, ಕಳೆದ ಎರಡು ದಿನದಲ್ಲಿ 286 ಜನ ಸೋಂಕಿತರಿಗೆ ಚುಚ್ಚು ಮದ್ದು ನೀಡದೆ ಇರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಎರಡು ದಿನದ ವಿಳಂಬದ ಕಾರಣವೇನು. ತಕ್ಷಣವೇ ರೆಮ್ಡಿಸಿವಿರ್ ಚುಚ್ಚು ಮದ್ದು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಖಂಡ್ರೆ ಮನವಿ ಮಾಡಿದ್ದಾರೆ.