ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ ಎರಡು ದಿನಗಳಲ್ಲಿ ಮತ್ತೆ 20 ಜನರಿಗೆ ಸೋಂಕು ದೃಢಪಟ್ಟಿದೆ.
ಬಸವ ಕಲ್ಯಾಣದಲ್ಲಿ ಮತ್ತೆ 20 ಜನರಿಗೆ ಕೊರೊನಾ ದೃಢ! - ಬಸವಕಲ್ಯಾಣ 20 ಜನರಿಗೆ ಕೊರೊನಾ ದೃಢ
ಬಸವಕಲ್ಯಾಣ ನಗರದಲ್ಲಿ ಕಳೆದ ಎರಡು ದಿನಗಳಲ್ಲಿ ಮತ್ತೆ 20 ಜನರಿಗೆ ಸೋಂಕು ದೃಢಪಟ್ಟಿದೆ.
ನಗರ ಸೇರಿದಂತೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 532 ಕ್ಕೆ ತಲುಪಿದೆ. ನಗರದ ಗಂಗಾ ಕಾಲೊನಿಯ 33 ವರ್ಷದ ಮಹಿಳೆ, 1 ವರ್ಷದ ಬಾಲಕಿ, ಬುಧವಾರ ಪೇಟಗಲ್ಲಿಯ 58 ವರ್ಷದ ವ್ಯಕ್ತಿ, ಹೊಸಪೇಟೆಯಲ್ಲಿ 30 ವರ್ಷದ ಪುರುಷ, ಸರ್ವೋದಯ ಕಾಲೊನಿಯ 59 ವರ್ಷದ ಪುರುಷ, 85 ವರ್ಷದ ವೃದ್ಧ, 24 ವರ್ಷದ ಯುವಕ, ನಗರದ 39, 47 ವರ್ಷದ ಪುರುಷರು, 46 ವರ್ಷದ ಮಹಿಳೆ, ತಾಲೂಕಿನ ಹಾರಕೂಡ ಗ್ರಾಮದ 24 ವರ್ಷದ ಯುವಕ, ಹಾರಕೂಡ ತಾಂಡಾದ 23 ವರ್ಷದ ಯುವಕ, ಘೋಟಾಳ ಗ್ರಾಮದ 70 ವರ್ಷದ ವೃದ್ಧ, ಹುಲಸೂರನ 70 ವರ್ಷದ ವೃದ್ಧ, ಗೋರ್ಟಾ (ಬಿ)ಗ್ರಾಮದ 32 ವರ್ಷದ ಪುರುಷ, ಯದಲಾಪೂರ ಗ್ರಾಮದ 55 ವರ್ಷದ ಪುರುಷನಿಗೆ ಸೋಂಕು ಧೃಡಪಟ್ಟಿದೆ.
ಇನ್ನು ಶುಕ್ರವಾರ 5 ಜನರಿಗೆ ಸೋಂಕು ದೃಢಪಟ್ಟಿದ್ದು, ಆಲಗೂಡ ಗ್ರಾಮದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾನೆ.