ಬಸವಕಲ್ಯಾಣ (ಬೀದರ್): ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಾರಕ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಭಾನುವಾರ ಮತ್ತೆ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಕೊರೊನಾಗೆ ಓರ್ವ ಬಲಿಯಾಗಿದ್ದಾನೆ.
ಬಸವಕಲ್ಯಾಣದಲ್ಲಿ ಇಬ್ಬರಿಗೆ ಕೊರೊನಾ: ಓರ್ವ ಬಲಿ - Basavakalyana corona news
ಬಸವಕಲ್ಯಾಣದಲ್ಲಿಂದು ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಓರ್ವ ಬಲಿಯಾಗಿದ್ದಾನೆ.

ಬಸವಕಲ್ಯಾಣದಲ್ಲಿ ಇಬ್ಬರಿಗೆ ಕೊರೊನಾ
ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ತಡೋಳಾ ಬಳಿಯ ಕಿಶನ್ ತಾಂಡಾದ 55 ವರ್ಷದ ವೃದ್ಧ, ಬೀದರ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆ.8 ರಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ತಾಲೂಕಿನ ಧನ್ನೂರಾ (ಆರ್) ಗ್ರಾಮದ 65 ವರ್ಷದ ವ್ಯಕ್ತಿ, ನಾರಾಯಣಪೂರ ಗ್ರಾಮದ 70 ವರ್ಷದ ವೃದ್ಧೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 497ಕ್ಕೆ ತಲುಪಿದೆ.