ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಗಡಿ ಬಂದ್.. ಪ್ರಯಾಣಿಕರ ಪರದಾಟ

ಕೊರೊನಾ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ, ಸಾರಿಗೆ ಹಾಗೂ ಸರಕು ಸಾಗಾಣಿಕೆ ವಾಹನಗಳ ಪ್ರವೇಶಕ್ಕೂ ನಿಷೇಧ ಹೇರಿದೆ. ರಾಷ್ಟ್ರೀಯ ಹೆದ್ದಾರಿ-65 ರಲ್ಲಿ ಇರುವ ಚಂಡಕಾಪುರ ಸಮೀಪದ ಗಡಿಯಲ್ಲಿ ಅಗತ್ಯ ವಸ್ತುಗಳ ಸರಕು ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವಾಹನಗಳು ಪ್ರವೇಶ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ

corona
ಅಂತರರಾಜ್ಯ ಹೆದ್ದಾರಿ ಬಂದ್

By

Published : Mar 24, 2020, 8:22 AM IST

ಬಸವಕಲ್ಯಾಣ : ಕೊರೊನಾ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಅಂತರರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ರಾಜ್ಯ ಸರ್ಕಾರ ಜನ ಸಂಚಾರಕ್ಕೆ ಬ್ರೇಕ್ ಹಾಕಿದೆ.

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶ ಪಡೆಯುವ ಅಂತರಾಜ್ಯ ಗಡಿಗಳಲ್ಲಿ ಪೊಲೀಸರನ್ನು ನೇಮಕ ಮಾಡಲಾಗಿದ್ದು, ಸಾರಿಗೆ ಹಾಗೂ ಸರಕು ಸಾಗಾಣಿಕೆ ವಾಹನಗಳ ಪ್ರವೇಶಕ್ಕೂ ನಿಷೇಧ ಹೇರಿದೆ. ರಾಷ್ಟ್ರೀಯ ಹೆದ್ದಾರಿ-65 ರಲ್ಲಿ ಇರುವ ಚಂಡಕಾಪುರ ಸಮೀಪದ ಗಡಿಯಲ್ಲಿ ಅಗತ್ಯ ವಸ್ತುಗಳ ಸರಕು ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವಾಹನಗಳು ಪ್ರವೇಶ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ.

ಸಾರಿಗೆ ವಾಹನಗಳ ನಿಷೇಧದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಂಬೈ ಪೂನಾ ಸೇರಿದಂತೆ ವಿವಿಧ ಮಹಾನಗರಗಳಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರು ತೀವ್ರ ಪರದಾಡುವಂತಾಗಿದ್ದು, ಮಹಾರಾಷ್ಟ್ರದಿಂದ ಬಹುತೇಕ ಪ್ರಯಾಣಿಕರು ಗಡಿಯಿಂದ ಬೈಕ್ ಹಾಗೂ ಬಾಡಿಗೆ ಕಾರುಗಳ ಮೂಲಕ ಜಿಲ್ಲೆಗೆ ಆಗಮಿಸುತಿದ್ದಾರೆ, ಸಸ್ತಾಪುರ ಬಂಗ್ಲಾ ಸೇರಿದಂತೆ ವಿವಿಧೆಡೆ ಚೆಕ್ ಪೋಸ್ಟ್ ಗಳಲ್ಲಿ ಇರುವ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರಯಾಣಿಕರನ್ನು ಪರಿಶೀಲಿಸಿ ಮುಂದೆ ಕಳುಹಿಸುತ್ತಿದ್ದಾರೆ.

ಅಂತರರಾಜ್ಯ ಹೆದ್ದಾರಿ ಬಂದ್

ಪೂನಾ, ಮುಂಬಯಿನಿಂದ ಆಗಮಿಸಿರುವ ಪ್ರಯಾಣಿಕರಲ್ಲಿ ಕೊರೊನಾಗೆ ಸಂಬಂಧಿಸಿದ ಯಾವುದಾದರು ಲಕ್ಷಣಗಳು ಇದೆಯಾ ಎಂದು ಪರಿಶೀಲಿಸುತ್ತಿರುವ ಆರೋಗ್ಯ ಇಲಾಖೆ ತಂಡ, ಹೊರಗಿನಿಂದ ಬಂದವರು ಹದಿನಾಲ್ಕು ದಿನಗಳ ಕಾಲ ಮನೆಯಲ್ಲೇ ಇರಬೇಕು. ಆರೋಗ್ಯದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬಂದರೂ ತಕ್ಷಣಕ್ಕೆ ತಮ್ಮ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡುತ್ತಿದೆ.

ABOUT THE AUTHOR

...view details