ಬೀದರ್:ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರಬೇಕು ಎನ್ನುವಷ್ಟರಲ್ಲೇ, ಲಾಕ್ಡೌನ್ ಘೋಷಣೆಯಾಗಿದೆ. ಈಗ ಬೆಳೆದ ದ್ರಾಕ್ಷಿಯನ್ನು ಮಾರಾಟ ಮಾಡಲಾಗದೇ ಬೆಳೆಗಾರನೊಬ್ಬ ಕಂಗಾಲಾಗಿದ್ದಾರೆ.
ಹುಮನಾಬಾದ್ ತಾಲೂಕಿನ ಘಾಟಬೋರಾಳ ಗ್ರಾಮದ ಗೊರಖನಾಥ್ ಸಗರ ಎಂಬ ರೈತ ತಮ್ಮ ಎರಡು ಎಕರೆ ಭೂಮಿಯಲ್ಲಿ 6 ಲಕ್ಷ ರೂಪಾಯಿ ಖರ್ಚು ಮಾಡಿ ದ್ರಾಕ್ಷಿ ಬೆಳೆದಿದ್ದಾರೆ. ಆದ್ರೆ ಈಗ ಬೆಳೆದು ನಿಂತಿರುವ ದ್ರಾಕ್ಷಿಯನ್ನು ಮಾರುಕಟ್ಟೆಗೆ ಹೋಗಿ ಮಾರಲಾಗ್ತಿಲ್ಲ. ಕಾರಣ ಜನ ಮನೆಗಳಿಂದ ಹೊರ ಬರುತ್ತಿಲ್ಲ. ಹಾಗಾಗಿ ದ್ರಾಕ್ಷಿ ಗಿಡದಲ್ಲೇ ಕೆಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿದೆ.