ಬೀದರ್:ದೆಹಲಿಯ ಜಮಾತ್ಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಮುಖಾಂತರ ಒಲ್ಡ್ ಸಿಟಿಯಲ್ಲಿ ಇಂದು ಮತ್ತೆ ಇಬ್ಬರು ಸೋಂಕಿಗೆ ತುತ್ತಾಗಿದ್ದಾರೆ.
ಬೀದರ್ನ ಓಲ್ಡ್ ಸಿಟಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್: 28ಕ್ಕೇರಿದ ಸೋಂಕಿತರ ಸಂಖ್ಯೆ...! - 2 corona cases find in Bidar
ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, 14 ಜನರನ್ನು ಗುಣಮುಖರನ್ನಾಗಿ ಮಾಡಿ ಮನೆಗೆ ಕಳುಹಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ಸೋಂಕಿಗೆ ಒಂದು ಸಾವಾಗಿದೆ. ಸದ್ಯ ಕೊರೊನಾ ವಾರ್ಡ್ನಲ್ಲಿ13 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ.
ಬೀದರ್ನ ಒಲ್ಡ್ ಸಿಟಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್
ಇನ್ನು ರಾಜ್ಯಾದ್ಯಂತ ಇಂದು 10 ಮಂದಿ ಹೊಸ ಪ್ರಕರಣಗಳು ದಾಖಲಾಗಿವೆ. ಬೀದರ್ನಲ್ಲಿ 2, ಬಾಗಲಕೋಟೆಯಲ್ಲಿ 2, ದಾವಣಗೆರೆಯಲ್ಲಿ 3, ಹಾವೇರಿ, ವಿಜಯಪುರ ಹಾಗೂ ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858ಕ್ಕೆ ಏರಿದೆ.
Last Updated : May 11, 2020, 1:41 PM IST