ಬಸವಕಲ್ಯಾಣ: ತಾಲೂಕಿನಲ್ಲಿ ಮಾರಕ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ನಗರದಲ್ಲಿ ಓರ್ವ ಯುವತಿ ಸೇರಿ ಮತ್ತೆ ಮೂವರು ಬಾಲಕಿಯರಲ್ಲಿ ಸೋಂಕು ಪತ್ತೆಯಾಗಿದೆ.
ಬಸವಕಲ್ಯಾಣದಲ್ಲಿ ಸಹೋದರಿಯರಿಗೆ ವಕ್ಕರಿಸಿದ ಕೊರೊನಾ: ಸೋಂಕಿಗೆ ವೃದ್ಧೆ ಬಲಿ - ಬೀದರ್ ಜಿಲ್ಲೆಯ ಬಸವಕಲ್ಯಾಣ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಸಹೋದರಿಯರಿಗೆ ಕೊರೊನಾ ಸೋಂಕು ತಗುಲಿದೆ.
ಇದರಿಂದ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ನಗರದ ತ್ರಿಪುರಾಂತ ನಿವಾಸಿಗಳಾದ 17 ವರ್ಷದ ಯುವತಿ, 9 ವರ್ಷದ ಬಾಲಕಿ ಹಾಗೂ ಜೂನ್ 30ರಂದು ಪತ್ತೆಯಾಗಿದ್ದ ಅನಾಥ ಹೆಣ್ಣು ಮಗುವಿಗೆ ಸೋಂಕು ತಗುಲಿದೆ. ತ್ರಿಪುರಾಂತನ ಬಾಲಕಿಯರು ಸಹೋದರಿಯರಾಗಿದ್ದು, ಮರಾಷ್ಟ್ರದಿಂದ ಮರಳಿ ಬಂದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾಗೆ ತಾಲೂಕಿನ ರಾಜೇಶ್ವರ ಗ್ರಾಮದ 70 ವರ್ಷದ ವೃದ್ಧೆ ಬಲಿಯಾಗಿದ್ದಾಳೆ. ಜೂನ್ 29ರಂದು ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತಳ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಕೆಗೆ ಕೊರೊನಾ ತಗುಲಿರುವುದು ವರದಿಯಲ್ಲಿ ದೃಢಪಟ್ಟಿದೆ. ಇದರಿಂದ ತಾಲೂಕಿನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿದೆ.