ಕರ್ನಾಟಕ

karnataka

ETV Bharat / state

ಕೊರೊನಾ ಜಾಗೃತಿ ಮೂಡಿಸಲು ರಸ್ತೆಗಿಳಿದ ಪೌರಾಯುಕ್ತೆ : ಮಾಸ್ಕ್​ ಇಲ್ಲದವರಿಗೆ ಬಿತ್ತು ದಂಡ - latest bidar, basavakalyan news

ಬಸವಲ್ಯಾಣ ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ನೇತೃತ್ವದಲ್ಲಿ ನಗರದ ಅಂಬೇಡ್ಕರ್‌ ಮುಖ್ಯರಸ್ತೆ ಬಳಿ ಸಾರ್ವಜನಿಕರನ್ನು ತಡೆದು ತಪಾಸಣೆ ನಡೆಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ, ಮಾಸ್ಕ್ ಇಲ್ಲದೆ ರಸ್ತೆಗೆ ಆಗಮಿಸಿದ 115 ಜನರಿಗೆ ತಲಾ 50 ರೂ. ದಂಡ ವಿಧಿಸಿದ್ದಾರೆ.

basavaklyana
ಕೊರೊನಾ ಜಾಗೃತಿ ಮೂಡಿಸಲು ರಸ್ತೆಗಿಳಿದ ಪೌರಾಯುಕ್ತೆ

By

Published : May 24, 2020, 2:53 PM IST

ಬಸವಕಲ್ಯಾಣ :ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರು ಮಾಸ್ಕ್​ ಧರಿಸದೆ ರಸ್ತೆಗೆ ಇಳಿಯುವ ಸಾರ್ವಜನಿಕರನ್ನು ತಡೆದು ನಗರಸಭೆ ಸಿಬ್ಬಂಧಿಯವರು ದಂಡ ವಿಧಿಸುವ ಮೂಲಕ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ನೇತೃತ್ವದಲ್ಲಿ ನಗರದ ಅಂಬೇಡ್ಕರ್‌ ಮುಖ್ಯರಸ್ತೆ ಬಳಿ ಸಾರ್ವಜನಿಕರನ್ನು ತಡೆದು ತಪಾಸಣೆ ನಡೆಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ, ಮಾಸ್ಕ್ ಇಲ್ಲದೆ ರಸ್ತೆಗೆ ಆಗಮಿಸಿದ 115 ಜನರಿಗೆ ತಲಾ 50 ರೂ. ದಂಡ ವಿಧಿಸಿದ್ದಾರೆ.

ಕೊರೊನಾ ಜಾಗೃತಿ ಮೂಡಿಸಲು ರಸ್ತೆಗಿಳಿದ ಪೌರಾಯುಕ್ತೆ

ಕೊರೊನಾ ಹರಡುವಿಕೆ ತಡೆಗಟ್ಟಲು ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ. ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿಯೇ ರಸ್ತೆಗೆ ಬರಬೇಕು. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತದಿಂದ ಜಾರಿಗೊಳಿಸಿದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ABOUT THE AUTHOR

...view details