ಕರ್ನಾಟಕ

karnataka

ETV Bharat / state

ಯಾರೂ ಒಳ  ಪ್ರವೇಶಿಸದಂತೆ ಬೀದರ್​ - ಮಹಾರಾಷ್ಟ್ರ ಗಡಿ ಗ್ರಾಮದಲ್ಲಿ ಯುವಕರ ಕಾವಲು - ಬೀದರ್​ -ಮಹಾರಾಷ್ಟ್ರ ಗಡಿ ಗ್ರಾಮಗಳಲ್ಲಿ ಕೊರೊನಾ ಆತಂಕ

ಮಹಾರಾಷ್ಟ್ರದ ಉದಗಿರ ಪಟ್ಟಣ ಬೀದರ್​ ಜಿಲ್ಲೆಯ ಕಮಲನಗರ ಹಾಗೂ ಔರಾದ್ ತಾಲೂಕಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ವ್ಯವಹಾರ, ವ್ಯಾಪಾರಕ್ಕಾಗಿ ರಾಜ್ಯದ ಬಹುತೇಕ ಜನರು ಈ ಪಟ್ಟಣವನ್ನೇ ಅವಲಂಬಿಸಿದ್ದಾರೆ. ಇದೀಗ, ಉದಗಿರ ರೆಡ್​ ಝೋನ್ ಆಗಿರುವುದರಿಂದ ಗಡಿ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ.

Corona anxiety in Bidar-Maharashtra border villages
ಬೀದರ್​ -ಮಹಾರಾಷ್ಟ್ರ ಗಡಿ ಗ್ರಾಮದಲ್ಲಿ ಯುವಕರ ಕಾವಲು

By

Published : May 7, 2020, 12:09 PM IST

Updated : May 7, 2020, 1:06 PM IST

ಬೀದರ್ : ನೆರೆಯ ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಉದಗಿರ ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲೆಯೊಳಗೆ ಯಾರು ಬಾರದಂತೆ ತಡೆಯಲು ಗಡಿ ಗ್ರಾಮಗಳಲ್ಲಿ ಯುವಕರು ಕಾವಲು ಕಾಯತ್ತಿದ್ದಾರೆ.

ಜಿಲ್ಲೆಯ ಕಮಲಾನಗರ ಪಟ್ಟಣದಿಂದ ಎರಡು ಕಿ.ಮೀ ಅಂತರದಲ್ಲೇ ಮಹಾರಾಷ್ಟ್ರ ಗಡಿ ಇದೆ. ಗಡಿಯಿಂದ 15 ಕಿ.ಮೀ ದೂರದಲ್ಲಿ ಉದಗಿರ ಪಟ್ಟಣವಿದೆ. ಇಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿಗೆ ಮಹಿಳೆಯೊಬ್ಬರು ಬಲಿಯಾಗಿದ್ದರು. ಇದರ ಬೆನ್ನಲ್ಲೆ ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 21 ಕ್ಕೇರಿದೆ. ಹೀಗಾಗಿ ಜಿಲ್ಲಾಡಳಿತ ಅಂತಾರಾಜ್ಯ ಮಾರ್ಗಗಳನ್ನು ಬಂದ್​ ಮಾಡಿದೆ.

ಆದರೆ, ಕೆಲವರು ಚೆಕ್​ ಪೋಸ್ಟ್​ಗಳನ್ನು ತಪ್ಪಿಸಿಕೊಂಡು ಒಳ ರಸ್ತೆಗಳ ಮೂಲಕ ರಾಜ್ಯ ಪ್ರವೇಶ ಮಾಡುತ್ತಿದ್ದಾರೆ. ಹೀಗಾಗಿ, ಗಡಿ ಗ್ರಾಮ ಮದನೂರಿನ ಹೊರ ವಲಯದಲ್ಲಿರುವ ಎಲ್ಲ ಸಣ್ಣ ಕೂಡು ರಸ್ತೆಗಳನ್ನು ಬಂದ್ ಮಾಡಿರುವ ಗ್ರಾಮಸ್ಥರು, ಅಕ್ರಮವಾಗಿ ರಾಜ್ಯಕ್ಕೆ ಪ್ರವೇಶ ಮಾಡುವವರ ಮೇಲೆ ನಿಗಾ ಇಟ್ಟಿದ್ದಾರೆ.

ಬೀದರ್​ -ಮಹಾರಾಷ್ಟ್ರ ಗಡಿ ಗ್ರಾಮದಲ್ಲಿ ಯುವಕರ ಕಾವಲು

ಮಹಾರಾಷ್ಟ್ರದ ಉದಗಿರ ಪಟ್ಟಣ ಜಿಲ್ಲೆಯ ಕಮಲನಗರ ಹಾಗೂ ಔರಾದ್ ತಾಲೂಕಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ವ್ಯವಹಾರ, ವ್ಯಾಪಾರಕ್ಕಾಗಿ ರಾಜ್ಯದ ಬಹುತೇಕ ಜನರು ಈ ಪಟ್ಟಣವನ್ನೇ ಅವಲಂಬಿಸಿದ್ದಾರೆ. ಇದೀಗ, ಉದಗಿರ ಪಟ್ಟಣ ರೆಡ್​ ಝೋನ್ ಆಗಿರುವುದರಿಂದ ಗಡಿ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ.

ನಿಷೇಧಾಜ್ಞೆ ವಿಸ್ತರಣೆ:ಜಿಲ್ಲೆಯಾದ್ಯಂತ ಕಲಂ 144 ಅನ್ವಯ ಮೇ. 17 ರವರೆಗೆ ನಿಷೇಧಾಜ್ಞೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ಆದೇಶ ಹೊರಡಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

ಜಿಲ್ಲಾಧಿಕಾರಿಗಳ ಆದೇಶ ಪ್ರತಿ
Last Updated : May 7, 2020, 1:06 PM IST

ABOUT THE AUTHOR

...view details