ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್: ಕಂಗಾಲಾದ ವಸತಿ ಶಾಲೆ ಗುತ್ತಿಗೆ ಸಿಬ್ಬಂದಿಗಳು - bidar protest today

ಬೀದರ್​ ಜಿಲ್ಲೆಯ ವಸತಿ ಶಾಲೆಯ ಗುತ್ತಿಗೆ ಸಿಬ್ಬಂದಿ ಹಾಗೂ ಶಿಕ್ಷಕರು ಕಳೆದ 6 ತಿಂಗಳಿನಿಂದ ಸಂಬಳವಿಲ್ಲದೇ ಪರದಾಡುತ್ತಿದ್ದಾರೆ.ಈ ಹಿನ್ನೆಲೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

Contract employees protest in bidar
ಕಂಗಾಲಾದ ವಸತಿ ಶಾಲೆ ಗುತ್ತಿಗೆ ಸಿಬ್ಬಂದಿಗಳು

By

Published : Sep 8, 2020, 11:44 PM IST

ಬೀದರ್: ಹತ್ತಾರು ವರ್ಷದಿಂದ ಕಡಿಮೆ ಸಂಬಳವಿದ್ದರೂ ಸರ್ಕಾರಿ ನೌಕರರ ಸರಿಸಮಾನವಾಗಿ ವಸತಿ ಶಾಲೆಯ ಗುತ್ತಿಗೆ ಸಿಬ್ಬಂದಿ ಹಾಗೂ ಶಿಕ್ಷಕರು ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ, ಈಗ ಅವರಿಗೆ ಕೆಲಸ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಇತ್ತ ಸಂಬಳವೂ ಇಲ್ಲ, ಅತ್ತಾ ಕೆಲಸವೂ ಇಲ್ಲದೇ ಅವರ ಬದುಕು ಈಗ ಅತಂತ್ರವಾಗಿದೆ.

ಬೀದರ್ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೇತೃತ್ವದಲ್ಲಿ ವಸತಿ ಶಾಲೆಗಳಾದ ಮುರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೆಯ್, ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂದಿ, ಏಕಲವ್ಯ ವಸತಿ ಶಾಲೆಗಳಲ್ಲಿ ಸುಮಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಂಗಾಲಾದ ವಸತಿ ಶಾಲೆ ಗುತ್ತಿಗೆ ಸಿಬ್ಬಂದಿಗಳು

200ಕ್ಕೂ ಹೆಚ್ಚು ಶಿಕ್ಷಕರು, ಪ್ರಥಮ ದರ್ಜೆ ಸಹಾಯಕರು ಹಾಗೂ ಶುಶ್ರೂಷಕಿಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 6 ತಿಂಗಳಿಂದ ಸಂಬಳವನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜ ಆಗಿಲ್ಲವಂತೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಕಂಪನಿ, ತನ್ನ ಸಿಬ್ಬಂದಿ ಸಂಬಳವನ್ನು ಕಡಿತಗೊಳಿಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸ್ಪಷ್ಟ ನಿರ್ದೇಶನವನ್ನು ನೀಡಿವೆ. ಆದರೆ, ವಸತಿ ಶಾಲೆಯ ಶಿಕ್ಷಕರಿಗೆ ಕಳೆದ ಐದು ತಿಂಗಳಿಂದ ಸಂಬಳವನ್ನೇ ಸರ್ಕಾರ ನೀಡಿಲ್ಲ. ಸರ್ಕಾರ ತಾನು ಮಾಡಿದ ಆದೇಶಗಳಿಗೆ ತಾನೇ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಶಿಕ್ಷಕರು ಡಿ ಗ್ರೂಪ್ ನೌಕರರನ್ನು ಕಂಗೆಡಿಸಿದ್ದು, ಜೀವನ ನಡೆಸಲು ಶಿಕ್ಷಕ ವೃಂದ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ABOUT THE AUTHOR

...view details