ಬೀದರ್: ಹಿಜಾಬ್ ವಿವಾದ ತಾರಕಕ್ಕೇರಲು ಕೆಲ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ನಿಂದ ರಸ್ತೆ ಮೂಲಕ ಕಲಬುರಗಿಗೆ ಪ್ರಯಾಣಿಸುವಾಗ ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೊರ ವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರ ಕಾಂಗ್ರೆಸ್ನವರಿಗೆ ಬಿಸಿ ತುಪ್ಪ ಆಗಿದೆ. ನುಂಗಲಿಕ್ಕೂ ಆಗ್ತಿಲ್ಲ ಹೊರಗ ಹಾಕಲಿಕ್ಕೂ ಆಗ್ತಿಲ್ಲ. ಕೆಲ ಕಾಂಗ್ರೆಸ್ ನಾಯಕರು ಹಿಜಾಬ್ ವಿವಾದಕ್ಕೆ ಹಿಂದಿನಿಂದ ಕೊಕ್ ಕೊಡ್ತಿದ್ದಾರೆ ಎಂದರು.