ಬಸವಕಲ್ಯಾಣ:ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ದಿ.ಶಾಸಕ ಬಿ.ನಾರಾಯಾಣರಾವ ಪತ್ನಿ ಮಾಲಾ ನಾರಾಯಣರಾವ ಸಸ್ತಾಪೂರ ಬಂಗ್ಲಾ ಬಳಿಯ ನಾರಾಯಣರಾವ ಅವರ ಸಮಾಧಿಗೆ ನಮನ ಸಲ್ಲಿಸಿ, ಕಣ್ಣೀರು ಹಾಕಿದ ಪ್ರಸಂಗ ಜರುಗಿತು.
ಪತಿ ಸಮಾಧಿ ಬಳಿ ಕಣ್ಣೀರು ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಪಕ್ಷದ ಬಿ.ಫಾರ್ಮ್ನೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಮಾಲಾ ಅವರು ನೇರವಾಗಿ ಪತಿ ದಿ.ಶಾಸಕ ಬಿ.ನಾರಾಯಣರಾವ ಅವರ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ, ಪತಿ ನೆನೆದು ಕಣ್ಣೀರು ಹಾಕಿದರು. ನಂತರ ನಗರದ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ರಾಜಾ ಬಾಗ್ ಸವಾರ ದರ್ಗಾ ಸೇರಿದಂತೆ ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು.
ನಗರ ಸಭೆ ಮಾಜಿ ಅಧ್ಯಕ್ಷೆ ಶಹಾಜಹಾನ್ ಶೇಖ್, ತನ್ವೀರ ಅಹ್ಮದ್, ನಗರ ಸಭೆ ಸದಸ್ಯರಾದ ಏಜಾಜ್ ಲಾತೂರೆ, ಮಲ್ಲಿಕಾರ್ಜುನ್ ಬೊಕ್ಕೆ, ಸಗೀರೋದ್ದಿನ್, ಕರೀಂ ಸಾಬ್, ಮೂಸಾ ಭಾಯಿ, ಮಹ್ಮದ್ ಖುತ್ಬೋದ್ದಿನ್, ಮನೋಜ ಮಾಶೆಟ್ಟೆ, ಅಶೋಕ ಢಗಳೆ, ಈಶ್ವರ ಸೋನಾರ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೇರಳ, ಮಹಾರಾಷ್ಟ್ರ, ಪಂಜಾಬ್ನಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ:ರೋಹಿಣಿ ಸಿಂಧೂರಿ
ಮಾರ್ಚ್ 30ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ್ ಪಾಟೀಲ ಹುಮನಾಬಾದ್, ರಹೀಮ ಖಾನ್ ಸೇರಿದಂತೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ಅಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.