ಬೀದರ್:ಜಿಲ್ಲೆಯ ಗಣೇಶ ಮೈದಾನದಲ್ಲಿ ಸಂಸದ ಭಗವಂತ ಖೂಬಾ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸುವ ಮೂಲಕ ಕಾಂಗ್ರೆಸ್ ಮತ್ತು ಶಾಸಕ ಈಶ್ವರ ಖಂಡ್ರೆ ವಿರುದ್ಧ ಕಿಡಿಕಾರಿದರು. ಖಂಡ್ರೆ ಬಹಿರಂಗ ಚರ್ಚೆಗೆ ಬಾರದೆ ಪಲಾಯನ ಮಾಡಿದ್ದಾರೆಂದು ಖೂಬಾ ಖಂಡ್ರೆ ವಿರುದ್ಧ ಗುಡುಗಿದರು.
ಬೀದರ್ನಲ್ಲಿ ಕೈ-ಬಿಜೆಪಿ ಶಕ್ತಿ ಪ್ರದರ್ಶನ; ನಾಯಕರ ಆರೋಪ, ಪ್ರತ್ಯಾರೋಪ - congress-BJP leaders programme at bidar
ಬೀದರ್ ನಗರ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಹಾಗೂ ಸಂಸದ ಭಗವಂತ ಖೂಬಾ ಇಬ್ಬರೂ ಆರೋಪ ಪ್ರತ್ಯಾರೋಪ ಮಾಡಿದರು.
ಇತ್ತ ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್ ಕೂಡ ನಗರದ ಝೀರಾ ಫಂಕ್ಷನ್ ಹಾಲ್ನಲ್ಲಿ ಶಕ್ತಿ ಪ್ರದರ್ಶನ ತೋರಿತ್ತು. ಸಾವಿರಾರು ಆಶ್ರಯ ಫಲಾನುಭವಿಗಳು ಕೈಯಲ್ಲಿ ಹಕ್ಕು ಪತ್ರ ಹಿಡಿದುಕೊಂಡು ಆಗಮಿಸಿದ್ದರು. ಮನೆಗಳನ್ನು ಕಟ್ಟಿಕೊಟ್ಟು ವರ್ಷಗಳೇ ಕಳೆದರೂ ಇವು ಬೋಗಸ್ ಮನೆ, ಇದರಲ್ಲಿ ಅಕ್ರಮ ನಡೆದಿದೆ. ನಮ್ಮ ಹೊಟ್ಟೆಯ ಮೇಲೆ ಹೊಡೆದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಫಲಾನುಭವಿಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಬಿಜೆಪಿ ಸ್ವಾರ್ಥಕ್ಕೆ ಭಾಲ್ಕಿಯ ಸಾವಿರಾರು ಬಡ ಫಲಾನುಭವಿಗಳು ಕಣ್ಣೀರು ಹಾಕುತ್ತಿದ್ದಾರೆ. ನಿಮಗೆ ಧಮ್ ಇದ್ದರೆ ತಕ್ಷಣವೇ ಬಡ ಫಲಾನುಭವಿಗಳಿಗೆ 15 ದಿನಗಳಲ್ಲಿ ಅವರ ಖಾತೆಗೆ ಹಣ ಹಾಕಿ. ಇಲ್ಲವೇ ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಮತ ಬೇಡಲು ಬಂದಾಗ ಅವರನ್ನು ಕೂಡಿ ಹಾಕಿ ಎಂದು ಈಶ್ವರ ಖಂಡ್ರೆ ಜನರಿಗೆ ಕರೆ ನೀಡಿದರು.
ಸಂಸದ ಭಗವಂತ ಖೂಬಾ ಮತ್ತು ಶಾಸಕ ಈಶ್ವರ ಖಂಡ್ರೆ ಅವರ ಶಕ್ತಿ ಪ್ರದರ್ಶನಕ್ಕೆ ಜಿಲ್ಲಾಡಳಿತ ಯಾವ ಆಧಾರದ ಮೇಲೆ ಅನುಮತಿ ನೀಡಿದೆಯೋ ಗೊತ್ತಿಲ್ಲ. ವಾಹನಗಳ ಮುಖಾಂತರ ಜನರನ್ನು ಕರೆಸುವ ಮೂಲಕ ಇವರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಆದರೆ ಎರಡೂ ಪಕ್ಷದವರು ಆಯೋಜಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಬಳಿ ಮಾಸ್ಕ್ ಇರಲಿಲ್ಲ, ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಈ ಒಂದು ಶಕ್ತಿ ಪ್ರದರ್ಶನದಲ್ಲಿ ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.