ಬಸವಕಲ್ಯಾಣ : ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತಿದ್ದಂತೆ ಸ್ಥಳೀಯಾಡಳಿತದಿಂದ ಚಟುವಟಿಕೆಗಳು ಚುರುಕುಗೊಂಡಿದ್ದು, ಇಂದಿನಿಂದಲೇ ನೀತಿ ಸಂಹಿತೆ ಪಾಲನೆಗೆ ಮುಂದಾಗಿದೆ.
ಕಳೆದ ವರ್ಷ ಸೆ. 24ರಂದು ಕೋವಿಡ್ ಸೋಂಕಿಗೆ ಬಲಿಯಾದ ಶಾಸಕ ದಿ. ಬಿ.ನಾರಾಯಣರಾವ್ ಅವರಿಂದ ತೆರವಾಗಿರುವ ಕ್ಷೇತ್ರದ ಉಪಚುನಾವಣೆಗೆ ಚುನಾವಣಾ ಆಯೋಗ ಏ.17ರಂದು ಮುಹೋರ್ತ ಫಿಕ್ಸ್ ಮಾಡಿದೆ. ಹೀಗಾಗಿ, ಇಂದಿನಿಂದಲೇ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲು ಸ್ಥಳೀಯಾಡಳಿತ ನಿರ್ಧರಿಸಿದೆ.
ಬ್ಯಾನರ್, ಪೋಸ್ಟರ್ಗಳನ್ನು ತೆರವುಗೊಳಿಸಿದ ಸ್ಥಳೀಯಾಡಳಿತದ ಸಿಬ್ಬಂದಿ ಇದನ್ನೂ ಓದಿ : ಕರ್ನಾಟಕ ಸೇರಿ ದೇಶದ 14 ವಿಧಾನಸಭೆ, 2 ಲೋಕಸಭೆ ಕ್ಷೇತ್ರಗಳ ಬೈಎಲೆಕ್ಷನ್ಗೆ ದಿನಾಂಕ ಪ್ರಕಟ
ಉಪಚುನಾವಣೆ ಕಾರಣ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅಳವಡಿಸಲಾಗಿರುವ ರಾಜಕೀಯ ಮುಖಂಡರ ಬ್ಯಾನರ್‌ಗಳು ಹಾಗೂ ಸರ್ಕಾರಿ ಯೋಜನೆಗಳ ಪ್ರಚಾರ ಕಟೌಟ್‌ಗಳನ್ನು ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಗರಸಭೆ ಪೌರಾಯುಕ್ತ ಗೌತಮ್ ಕಾಂಬಳೆ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದಲ್ಲಿ ಸಂಚರಿಸಿ ಪ್ರಮುಖ ವೃತ್ತಗಳು, ವಿವಿಧ ಬಡಾವಣೆಗಳಲ್ಲಿ ಅಳವಡಿಸಲಾಗಿರುವ ಬ್ಯಾನರ್, ಕಟೌಟ್ ಹಾಗೂ ಗೋಡೆಗಳಿಗೆ ಅಂಟಿಸಲಾಗಿರುವ ಭಿತ್ತಿ ಪತ್ರಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.