ಬೀದರ್ :ಕೊರೊನಾ ವೈರಸ್ ಭೀತಿಯಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಅವರ ಪೂರ್ವ ನಿಗದಿತ ಕಾರ್ಯಕ್ರಮಗಳೆಲ್ಲವನ್ನೂ ರದ್ದುಗೊಳಿಸಲಾಗಿದೆ.
ಸಿಎಂ ಆದೇಶದ ಹಿನ್ನೆಲೆ ಸಚಿವ ಪ್ರಭು ಚೌಹಾಣ್‌ರ ಕಾರ್ಯಕ್ರಮಗಳೆಲ್ಲ ರದ್ದು.. - bidar
ನಾಳೆ ಸಚಿವ ಚೌಹಾಣ್ ಅವರ ಸ್ವಕ್ಷೇತ್ರ ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಂಕು ಸ್ಥಾಪನೆ, ಉದ್ಘಾಟನೆ ಹಾಗೂ ಸಾರ್ವಜನಿಕ ಸಮಾರಂಭಗಳು ನಡೆಯಬೇಕಿದ್ದವು. ಈಗ ಎಲ್ಲಾ ಕಾರ್ಯಕ್ರಮಗಳನ್ನ ರದ್ದುಪಡಿಸಲಾಗಿದೆ.
![ಸಿಎಂ ಆದೇಶದ ಹಿನ್ನೆಲೆ ಸಚಿವ ಪ್ರಭು ಚೌಹಾಣ್‌ರ ಕಾರ್ಯಕ್ರಮಗಳೆಲ್ಲ ರದ್ದು.. Ministers](https://etvbharatimages.akamaized.net/etvbharat/prod-images/768-512-6398463-thumbnail-3x2-mng.jpg)
ಸಚಿವ ಪ್ರಭು ಚವ್ಹಾಣ ಅವರ ನಿಗದಿತ ಕಾರ್ಯಕ್ರಮಗಳು ರದ್ದು
ಈ ಕುರಿತು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ಈಟಿವಿ ಭಾರತ ಜತೆ ಮಾತನಾಡಿ, ರಾಜ್ಯ ಸರ್ಕಾರದ ನಿರ್ಧಾರದಂತೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಪೂರ್ವ ನಿಗದಿತ ಎಲ್ಲಾ ಸಾರ್ವಜನಿಕ ಸಮಾರಂಭ ಹಾಗೂ ಕಾರ್ಯಕ್ರಮಗಳನ್ನ ರದ್ದುಗೊಳಿಸಲಾಗಿದೆ ಎಂದರು.
ನಾಳೆ ಸಚಿವ ಚೌಹಾಣ್ ಅವರ ಸ್ವಕ್ಷೇತ್ರ ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಂಕು ಸ್ಥಾಪನೆ, ಉದ್ಘಾಟನೆ ಹಾಗೂ ಸಾರ್ವಜನಿಕ ಸಮಾರಂಭಗಳು ನಡೆಯಬೇಕಿದ್ದವು. ಆದರೆ, ಸಂಪುಟ ಸಚಿವರ ತೀರ್ಮಾನದ ನಂತರ ಸಿಎಂ ಬಿಎಸ್ವೈ ಅವರು ಪ್ರಕಟಿಸಿದಂತೆ ಸಚಿವರ ಎಲ್ಲಾ ಕಾರ್ಯಕ್ರಮಗಳನ್ನ ರದ್ದುಪಡಿಸಲಾಗಿದೆ ಎಂದಿದ್ದಾರೆ.