ಕರ್ನಾಟಕ

karnataka

ETV Bharat / state

ಏಯ್ ಫೋಟೋ ತೆಗಿಬೇಡ್ರಪ್ಪ, ಎಲೆಕ್ಷನ್ ಐತಿ.. ಸಿಎಂ ಬೊಮ್ಮಾಯಿ ಹೀಗೆಂದಿದ್ದೇಕೆ? - CM MLC election campaign in Bhalki town

ಭಾಲ್ಕಿ ಪಟ್ಟಣದಲ್ಲಿ ಪರಿಷತ್ ಚುನಾವಣೆ ಪ್ರಚಾರ ನಿಮಿತ್ತ ಆಗಮಿಸಿದ ವೇಳೆ ಬಿಜೆಪಿ ಮುಖಂಡ ಡಿ.ಕೆ ಸಿದ್ರಾಮ ನಿವಾಸದ ಬಳಿ ನಾಡ ದೊರೆಯನ್ನು ಸ್ವಾಗತಿಸಲು ಆರತಿ ತಟ್ಟೆ ಹಿಡಿದು ಮಹಿಳೆಯರು ನಿಂತಿದ್ದರು. ಸಂಪ್ರದಾಯದಂತೆ ಆರತಿ ಬೆಳಗಿದ ಆರು ಮಹಿಳೆಯರ ತಟ್ಟೆಗೆ ತಲಾ 500 ರೂ. ಮುಖ ಬೆಲೆಯ ನೋಟು ಹಾಕಿದರು..

CM Basavaraj Bommai Visits Bidar
ಆರತಿ ತಟ್ಟೆಗೆ ಹಣ ಹಾಕಿದ ಸಿಎಂ ಬೊಮ್ಮಾಯಿ

By

Published : Dec 6, 2021, 12:06 PM IST

ಬೀದರ್ :ಏಯ್ ಫೋಟೋ ತೆಗಿಬೇಡ್ರಪ್ಪ, ಎಲೆಕ್ಷನ್ ಐತಿ.. ಎಂದು ಸಿಎಂ ಬಸವರಾಜ ಬೊಮ್ಮಾಯಿ ಛಾಯಾಗ್ರಾಹಕರಿಗೆ ಹೇಳಿದರು.

ಆರತಿ ತಟ್ಟೆಗೆ ಹಣ ಹಾಕಿದ ಸಿಎಂ ಬೊಮ್ಮಾಯಿ..

ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಪರಿಷತ್ ಚುನಾವಣೆ ಪ್ರಚಾರ ನಿಮಿತ್ತ ಆಗಮಿಸಿದ ವೇಳೆ ಬಿಜೆಪಿ ಮುಖಂಡ ಡಿ.ಕೆ ಸಿದ್ರಾಮ ನಿವಾಸದ ಬಳಿ ನಾಡ ದೊರೆಯನ್ನು ಸ್ವಾಗತಿಸಲು ಆರತಿ ತಟ್ಟೆ ಹಿಡಿದು ಮಹಿಳೆಯರು ನಿಂತಿದ್ದರು. ಸಂಪ್ರದಾಯದಂತೆ ಆರತಿ ತಟ್ಟೆಗೆ 500 ರೂ. ಮುಖ ಬೆಲೆಯ ನೋಟು ಹಾಕಿದರು. 6 ಆರತಿ ತಟ್ಟೆಗೆ ತಲಾ 500 ರೂ.3,000 ರೂ. ಹಾಕಿದ್ದಾರೆ.

ಈ ವೇಳೆಯಲ್ಲಿ ತಟ್ಟೆಯಲ್ಲಿ ಹಣ ಹಾಕುವಾಗ ಛಾಯಾಗ್ರಾಹಕರನ್ನು ಉದ್ದೇಶಿಸಿ, ಇದೆಲ್ಲ ತೆಗಿಬೇಡಿ.. ಚುನಾವಣೆ ಇದೆ ಎಂದರು. ಸಿಎಂ ಆರತಿ ತಟ್ಟೆಗೆ ಹಣ ಹಾಕುತ್ತಿರುವ ವಿಡಿಯೋವನ್ನು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಪರ ಚುನಾವಣೆ ಪ್ರಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ:ಯಂಕ, ನಾಣಿ, ಶೀನ ಮನಬಂದಂತೆ ಮಾತಾಡ್ತಿದ್ದಾರೆ; ಚುನಾವಣೆಯಲ್ಲಿ ಉತ್ತರ ಕೊಡಬೇಕು: ಬಿಎಸ್‌ವೈ

ABOUT THE AUTHOR

...view details