ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರು ಗೌರಯುತವಾಗಿ ಸೇವೆಗೆ ಹಾಜರಾಗಬೇಕು: ಸಿಎಂ ಬಿಎಸ್​ವೈ - Bidar

ಸೇವೆಗೆ ಹಾಜರಾಗದ ನೌಕರರಿಗೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದಿಲ್ಲ. ಇಷ್ಟಕ್ಕೂ ಆಗಲಿಲ್ಲ ಅಂದ್ರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.

CM appeals to transport employees
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

By

Published : Apr 12, 2021, 1:27 PM IST

ಬೀದರ್: ಮುಷ್ಕರ ನಿರತ ಸಾರಿಗೆ ಸಂಸ್ಥೆ ನೌಕರರು ಗೌರಯುತವಾಗಿ ಸೇವೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರಿಗೆ ಸಿಎಂ ಮನವಿ

ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಮುಷ್ಕರದ ಹೆಸರಿನಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಮಾಡಬಾರದು. ಸೇವೆಗೆ ಹಾಜರಾಗದ ನೌಕರರಿಗೆ ಗೈರು ಹಾಜರಿ ಹಾಕುವಂತೆ ಸೂಚಿಸಲಾಗಿದೆ. ಅಲ್ಲದೇ ಗೈರು ಹಾಜರಾದ ನೌಕರರಿಗೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದಿಲ್ಲ. ಇಷ್ಟಕ್ಕೂ ಆಗಲಿಲ್ಲ ಅಂದ್ರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಯಾರದ್ದೋ ಮಾತು ಕೇಳಿ ಮುಷ್ಕರ ಮಾಡುವವರ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದಿಂದ ಸಾರಿಗೆ ಸಂಸ್ಥೆಗೆ 2,300 ಕೋಟಿ ರೂ.ನೀಡಿದ್ದೇವೆ. ಕಷ್ಟದ ಕಾಲದಲ್ಲಿ ಹೀಗೆ ಮಾಡೋದು ಸರಿಯಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಓದಿ:ಸಾರಿಗೆ ನೌಕರರು ಕೂಡಲೇ ಕೆಲಸಕ್ಕೆ ಹಾಜರಾಗಬೇಕು: ಸಿಎಂ ಬಿಎಸ್​ವೈ

ABOUT THE AUTHOR

...view details