ಬಸವಕಲ್ಯಾಣ: ನಗರದ ಮುಖ್ಯ ರಸ್ತೆಯಲ್ಲಿ ರಸ್ತೆ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಕೊಡಬೇಕು ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಬದಿ ನಿರ್ಮಿಸಿರುವ ಅಕ್ರಮ ಶೆಡ್ ತೆರವು ಮಾಡಿ: ಮಲ್ಲಿಕಾರ್ಜುನ ಖೂಬಾ - ಮಾಜಿ ಶಾಸಕ ಖೂಬಾ ಸೂಚನೆ
ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ನಡೆಸುವವರನ್ನು ಬಿಟ್ಟು ಶೆಡ್‌ಗಳನ್ನು ನಿರ್ಮಾಣ ಮಾಡಿದವರನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸ್ಥಳದಲಿದ್ದ ನಗರಸಭೆ ಅಧಿಕಾರಿಗಳಿಗೆ ಮಲ್ಲಿಕಾರ್ಜುನ ಖೂಬಾ ಸೂಚಿಸಿದರು.
![ರಸ್ತೆ ಬದಿ ನಿರ್ಮಿಸಿರುವ ಅಕ್ರಮ ಶೆಡ್ ತೆರವು ಮಾಡಿ: ಮಲ್ಲಿಕಾರ್ಜುನ ಖೂಬಾ Clear illegal shed road side, former MLA Khooba instructed](https://etvbharatimages.akamaized.net/etvbharat/prod-images/768-512-8401569-54-8401569-1597304751052.jpg)
ನಗರದ ಬಸವ ವನಕ್ಕೆ ಭೇಟಿ ನೀಡಿದ ನಂತರ ರಸ್ತೆ ಬದಿಯ ವ್ಯಾಪಾರಿಗಳನ್ನು ಗಮನಿಸಿದ ಮಾಜಿ ಶಾಸಕರು, ಬಹುತೇಕ ವ್ಯಾಪಾರಗಳು ತಮ್ಮ ಅಂಗಡಿಗಳ ಮುಂದೆ ರಸ್ತೆ ಮೇಲೆ ಕಟ್ಟೆ ನಿರ್ಮಿಸಿದರೆ, ಮತ್ತೆ ಕೆಲವರು ಶಾಶ್ವತವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸಿರುವುದು ಸರಿಯಲ್ಲ. ಇದರಿಂದ ರಸ್ತೆಯಲ್ಲಿ ಸಂಚರಿಸಲು ಜನರಿಗೆ ತೀವ್ರ ಸಮಸ್ಯೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ನಡೆಸುವವರನ್ನು ಬಿಟ್ಟು ಶೆಡ್‌ಗಳನ್ನು ನಿರ್ಮಾಣ ಮಾಡಿದವರನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸ್ಥಳದಲಿದ್ದ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಬಸವ ವನ ಮತ್ತು ಸುತ್ತಲಿನ ಪ್ರದೇಶವನ್ನು ಆಗಸ್ಟ್ 15ರ ಒಳಗಾಗಿ ಮೊದಲು ಸ್ವಚ್ಛಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹೇಳಿದರು.