ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್​ ನಿಯಂತ್ರಣದಲ್ಲಿ ಕೇಂದ್ರ-ರಾಜ್ಯ ಸರ್ಕಾರ ವಿಫಲ: ಈಶ್ವರ್​ ಖಂಡ್ರೆ - ಕೊರೊನಾ ವೈರಾಣು ನಿಯಂತ್ರಣ

ಮೋದಿ ಅವರು ಘೋಷಣೆ ಮಾಡಿದ ಆತ್ಮ ನಿರ್ಭರ ಯೋಜನೆ ಪ್ಯಾಕೇಜ್ ಆಕಾಶದಲ್ಲಿನ ಚುಕ್ಕೆ ಇದ್ದಂತಿದೆ. ಸಾಲ ಕೊಡೋದು ಪರಿಹಾರವಾದ್ರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹೇಗೆ ಸಾಧ್ಯ ಎಂದು ಈಶ್ವರ್​​ ಖಂಡ್ರೆ ವ್ಯಂಗ್ಯವಾಡಿದರು.

Ishwar Khandre
ಈಶ್ವರ ಖಂಡ್ರೆ.

By

Published : Jun 1, 2020, 4:52 PM IST

Updated : Jun 1, 2020, 7:29 PM IST

ಬೀದರ್: ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​​ ಖಂಡ್ರೆ ಹೇಳಿದ್ದಾರೆ.

ಕೊರೊನಾ ವೈರಸ್​ ನಿಯಂತ್ರಣದಲ್ಲಿ ಕೇಂದ್ರ-ರಾಜ್ಯ ಸರ್ಕಾರ ವಿಫಲ: ಈಶ್ವರ್​ ಖಂಡ್ರೆ

ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಆತ್ಮ ನಿರ್ಭರ ಯೋಜನೆ ಪ್ಯಾಕೇಜ್ ಆಕಾಶದಲ್ಲಿನ ಚುಕ್ಕೆ ಇದ್ದಂತಿದೆ. ಸಾಲ ಕೊಡೋದು ಪರಿಹಾರವಾದ್ರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹೇಗೆ ಸಾಧ್ಯ ಎಂದರು.

ಅಲ್ಲದೆ ರಾಜ್ಯ ಸರ್ಕಾರ ಘೋಷಣೆ ಮಾಡಿದ 17,000 ಕೋಟಿ ರೂಪಾಯಿ ಪ್ಯಾಕೇಜ್​ನಲ್ಲಿನ ಒಂದು ನಯಾ ಪೈಸೆ ಕೂಡ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ಸಿಕ್ಕಿಲ್ಲ. ಇವರು ಬರೀ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Last Updated : Jun 1, 2020, 7:29 PM IST

ABOUT THE AUTHOR

...view details