ಕರ್ನಾಟಕ

karnataka

ETV Bharat / state

ಮನೆಯಲ್ಲಿಯೇ ಬಸವ ಜಯಂತಿ ಆಚರಿಸಲು ಮನವಿ - ಬಸವರಾಜ ಪಾಟೀಲ ಸೇಡಂ ಲೆಟೆಟ್ಟ್​ ನ್ಯೂಸ್​

ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಜನರು ತಮ್ಮ, ತಮ್ಮ ಮನೆಗಳಲ್ಲಿಯೇ ಬಸವ ಜಯಂತಿ ಆಚರಿಸಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮನವಿ ಮಾಡಿದ್ದಾರೆ.

Former MP Basavaraja Patil
ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ

By

Published : Apr 23, 2020, 7:43 PM IST

Updated : Apr 23, 2020, 7:56 PM IST

ಬಸವಕಲ್ಯಾಣ:ಸಾರ್ವಜನಿಕವಾಗಿ ಕಾರ್ಯಕ್ರಮ ಆಯೋಜಿಸದೆ ತಮ್ಮ ತಮ್ಮ ಮನೆಗಳಲ್ಲಿಯೇ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಸವ ಜಯಂತಿ ಆಚರಿಸಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮನವಿ ಮಾಡಿದ್ದಾರೆ.

ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ
ಜಗತ್ತಿಗೆ ಕಾಡುತ್ತಿರುವ ಮಾರಕ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್ ಜಾರಿಗೊಳಿಸಿದೆ. ಹೀಗಾಗಿ ಜಯಂತಿ ನಿಮಿತ್ತ ಜನರು ಸಾರ್ವಜನಿಕವಾಗಿ ಸಭೆ, ಸಮಾರಂಭ ನಡೆಸದೆ ಮನೆಗಳಲ್ಲಿಯೇ ಜಯಂತಿ ಆಚರಿಸುವ ಮೂಲಕ ಬಸವ ಭಕ್ತರು ಸಮಾಜಕ್ಕೆ ಮಾದರಿಯಾಗಬೇಕು. ಯಾವುದೇ ಕಾರಣಕ್ಕೂ ಜಿಲ್ಲಾಡಾಳಿತ ಹಾಗೂ ಪೊಲೀಸರಿಗೆ ತೊಂದರೆ ನೀಡಬಾರದು ಎಂದು ಸಲಹೆ ನೀಡಿದ್ದಾರೆ.

ಕೊರೊನಾ ಹಾವಳಿ ಮುಗಿದ ನಂತರ ಬಸವಕಲ್ಯಾಣದಲ್ಲಿ ಒಂದು ವಿಶೇಷ ದಿನ ನಿಗದಿಪಡಿಸಿ ಅದ್ಧೂರಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸೇಡಂ ತಿಳಿಸಿದ್ದಾರೆ.


Last Updated : Apr 23, 2020, 7:56 PM IST

ABOUT THE AUTHOR

...view details