ಬೀದರ್: ಹಣಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡಿರುವ ಆರೋಪದಡಿ ಖಾಸಗಿ ಸುದ್ದಿ ವಾಹಿನಿ ವರದಿಗಾರ ಓಕಾರ್ ಮಠಪತಿ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿವೋರ್ವರು ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: ಸಚಿವ ಪ್ರಭು ಚವ್ಹಾಣ್ ಅವರು ಡಿಸೆಂಬರ್ ತಿಂಗಳಲ್ಲಿ ಆರ್ಟಿಒ ಕಚೇರಿ ಮೇಲೆ ದಾಳಿ ನಡೆಸಿದ್ದರು ಆರೋಪ ಕೇಳಿಬಂದಿತ್ತು.
ಅಧಿಕಾರಿ ದೂರಿನಲ್ಲಿ ಏನಿದೆ: ರಜೆಯಲ್ಲಿದ್ದ ಅಧಿಕಾರಿ ಮರಳಿ ಕಚೇರಿಗೆ ಬಂದ ನಂತರ ಖಾಸಗಿ ವಾಹಿನಿ ವರದಿಗಾರ, ಅಧಿಕಾರಿಯೊಂದಿಗೆ ವಿವರವಾಗಿ ಸಂಭಾಷಣೆ ನಡೆಸಿ, ಸಚಿವರ ದಾಳಿ ಬಗ್ಗೆಯೂ ಕೇಳಿದ್ದರು. ಆದ್ರೆ ಈ ಸಚಿವರ ವಿರುದ್ಧದ ಸಂಭಾಷಣೆಯ ವಿಡಿಯೋ ಪ್ರಸಾರ ಮಾಡದಂತೆ ಹಣದ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂದು ಆರ್ಟಿಓ ಅಧಿಕಾರಿ ವಿಶ್ವನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಕೇಳಿದ ಲಂಚದ ಹಣ ಕೊಡದ್ದಕ್ಕೆ ನನ್ನ ವಿರುದ್ಧ ಸುಳ್ಳು ವರದಿ ಬಿತ್ತರಿಸಿ ತೇಜೋವಧೆ ಮಾಡಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ವರದಿಗಾರನಿಂದಲೂ ದೂರು:
ವರದಿಗಾರ ಓಂಕಾರ್ ಮಠಪತಿ ಕೂಡ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ತನಗೆ ಜೀವ ಬೇದರಿಕೆ ಇದೆ ಹಾಗೂ ತನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ಪ್ರತಿ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.