ಕರ್ನಾಟಕ

karnataka

ETV Bharat / state

ನಿಷೇಧಾಜ್ಞೆ ಮೀರಿ ಹುಂಬತನ ತೋರಿದ ವ್ಯಕ್ತಿಯ ಬಂಧನ - case filed against person

ನಿಷೇಧಾಜ್ಞೆ ಉಲ್ಲಂಘಿಸಿ ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಕಟ್ಟಿಕೊಂಡು ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಖಟಕ ಚಿಂಚೋಳಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಹುಂಬುತನ ತೋರಿದ ವ್ಯಕ್ತಿ ವಿರುಧ್ಧ ಕೇಸ್​, case filed onperson violets rules of lock down
ನಿಷೇದಾಜ್ಞೆ ಮಿರಿ ಹುಂಬುತನ ತೊರಿದ ವ್ಯಕ್ತಿ ಮೇಲೆ ಕೇಸ್ ದಾಖಲು...!

By

Published : Mar 26, 2020, 8:55 PM IST

Updated : Mar 26, 2020, 9:05 PM IST

ಬೀದರ್: ಮಹಾಮಾರಿ ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಸರ್ಕಾರ ದೇಶವನ್ನೇ ಲಾಕ್​​​ಡೌನ್ ಮಾಡಿ ಎಂದು ಆದೇಶ ಮಾಡಿದೆ. ಈ ನಡುವೆ ಹುಂಬತನ ತೋರಿದ ವ್ಯಕ್ತಿಯೊಬ್ಬನ ವಿರುದ್ಧ ಖಟಕ ಚಿಂಚೋಳಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ವ್ಯಕ್ತಿ ಮೇಲೆ ಕೇಸ್ ದಾಖಲು

ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದ ಅನಿಲಕುಮಾರ್ ನಿಜಗುಣಕರ ಎಂಬಾತ ನಿಷೇಧಾಜ್ಞೆ ಉಲ್ಲಂಘಿಸಿ ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಕಟ್ಟಿಕೊಂಡು ಸುತ್ತಾಡುತ್ತಿದ್ದ. ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಪೊಲೀಸರು ಮನವರಿಕೆ ಮಾಡಿದ್ರು. ಆದರೆ ಹುಂಬತನಕ್ಕೆ ನಿಂತ ಅನಿಲಕುಮಾರ್ ಪೊಲೀಸರ ಮಾತಿಗೂ ಬಗ್ಗದೆ ಗ್ರಾಮದಲ್ಲಿ ಮತ್ತಷ್ಟು ಸುತ್ತಾಡಿದ್ದಾನೆ ಎನ್ನಲಾಗಿದೆ. ಇದನ್ನರಿತ ಸ್ಥಳೀಯ ಪಿಎಸ್ಐ ಹುಲೆಪ್ಪಾ, ಘಟನಾ ಸ್ಥಳಕ್ಕೆ ಭೇಟಿ ನೀಡಿ ತಿಳಿವಳಿಕೆ ಹೇಳಿದರೂ ಕೇಳದ ಅನಿಲಕುಮಾರ್ ವಿರುದ್ಧ ಕಲಂ 269 ಹಾಗೂ 271 ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಅರೆಸ್ಟ್ ಮಾಡಲಾಗಿದೆ.

Last Updated : Mar 26, 2020, 9:05 PM IST

ABOUT THE AUTHOR

...view details