ಬಸವಕಲ್ಯಾಣ: ತಾಲೂಕಿನ ಮಂಠಾಳ ಹಾಗೂ ಆಲಗೂಡ ಗ್ರಾಪಂಗಳ ಚುನಾವಣೆಯಲ್ಲಿ ಅಭ್ಯರ್ಥಿಗಳಿಬ್ಬರು ಸಮಬಲ ಸಾಧಿಸಿದ ಪರಿಣಾಮ ಲಾಟರಿ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಿದ್ದು ಮತ ಎಣಿಕೆ ಕೇಂದ್ರದಲ್ಲಿ ವಿಶೇಷವಾಗಿ ಗಮನ ಸೆಳೆಯಿತು.
ಮಂಠಾಳ ಗ್ರಾಮದ ವಾರ್ಡ್ ಸಂಖ್ಯೆ-7ರಲ್ಲಿ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಅನ್ನಪೂರ್ಣ ಕೊರಾಳೆ ಹಾಗೂ ತಾಹೆರಾಬಿ ಮೈನೋದ್ದಿನ್ ಅತ್ತಾರ ತಲಾ 509 ಮತ ಪಡೆದು ಸಮಬಲ ಸಾಧಿಸಿದರೆ, ತಾಲೂಕಿನ ಆಲಗೂಡ ಗ್ರಾಮದಲ್ಲಿನ ಜಯಶ್ರೀ ಧರ್ಮಾ ಹಾಗೂ ಸವಿತಾ ದೀಪಕ ಕೂಡ ತಲಾ 320 ಮತ ಪಡೆದು ಸಮಬಲ ಸಾಧಿಸಿದರು.
ಅಭ್ಯರ್ಥಿಗಳ ಸಮ್ಮುಖದಲ್ಲಿ ಒಪ್ಪಿಗೆ ಮೇರೆಗೆ ಸಹಾಯಕ ಆಯುಕ್ತ ಭುವನೇಶ ಪಾಟೀಲ ಹಾಗೂ ತಹಶೀಲ್ದಾರ ಸಾವಿತ್ರಿ ಸಲಗರ ನೇತೃತ್ವದಲ್ಲಿ ಮಂಠಾಳ ಹಾಗೂ ಆಲಗೂಡ ಸ್ಥಾನಕ್ಕೆ ಲಾಟರಿ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಲಾಟರಿ ಪ್ರಕ್ರಿಯೆಯಲ್ಲಿ ಮಂಠಾಳನಲ್ಲಿ ತಾಹೆರಾಬಿ ಮೈನೋದ್ದಿನ್ ಅತ್ತಾರ ಗೆಲುವು ಸಾಧಿಸಿದರೆ, ಆಲಗೂಡನಲ್ಲಿ ಸವಿತಾ ದೀಪಕ ಗೆಲುವು ಸಾಧಿಸಿದರು. ಮತದಾನದಲ್ಲಿ ಸಮಬಲ ಸಾಧಿಸಿದರೂ ಲಾಟರಿಯಲ್ಲಿ ಲಕ್ ಒಲಿಯದ ಕಾರಣ ಪರಾಜಿತ ಅಭ್ಯರ್ಥಿಗಳು ನಿರಾಸೆಯಿಂದ ಮನೆಗೆ ಹಿಂದಿರುಗಿದರು.
ಒಂದು ಮತದ ಅಂತರದಲ್ಲಿ ಮಹಿಳೆಗೆ ಗೆಲುವು