ಬೀದರ್:ಬೀದರ್ನಿಂದ ಬೆಂಗಳೂರಿಗೆ ಹೊರಟಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿದ್ದು, ಚಾಲಕನ ಚಾಣಾಕ್ಷತನದಿಂದಾಗಿ ಭಾರಿ ದುರಂತವೊಂದು ತಪ್ಪಿದೆ. 27 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಬಸ್ ಪಲ್ಟಿ: ಚಾಲಕನ ಚಾಣಾಕ್ಷತನದಿಂದ 27 ಜನ ಪ್ರಾಣಾಪಾಯದಿಂದ ಪಾರು...! - ಬಸ್ ಪಲ್ಟಿ: ಚಾಲಕನ ಚಾಣಾಕ್ಷತನದಿಂದ 27 ಜನರು ಪ್ರಾಣಾಪಾಯದಿಂದ ಪಾರು
ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ರಸ್ತೆ ಅಪಘಾತ ನಡೆದಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ರಸ್ತೆ ಅಪಘಾತ ನಡೆದಿದೆ. ನಿಯಂತ್ರಣ ಮೀರಿ ಎದುರಿನಿಂದ ಬಂದ ನಾಲ್ಕು ಚಕ್ರದ ವಾಹನವೊಂದು ಸಾರಿಗೆ ಬಸ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆಯಲ್ಲಿ ರಸ್ತೆಯಿಂದ ಬದಿಗೆ ಹಾಕಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ.
ಬಸ್ನಲ್ಲಿ 27 ಜನ ಪ್ರಯಾಣಿಕರು ಪ್ರವಾಸ ಮಾಡ್ತಿದ್ದರು. ಈ ಪೈಕಿ 15 ಜನರಿge ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಶಾಸಕ ರಾಜಶೇಖರ್ ಪಾಟೀಲ್ ಭೇಟಿ ನೀಡಿದ್ದಾರೆ. ಈ ಕುರಿತು ಹುಮನಾಬಾದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.