ಬಸವಕಲ್ಯಾಣ: ಅಕ್ರಮ ಮರಳು ದಂಧೆ ತಡೆಯುವಲ್ಲಿ ವಿಫಲರಾದ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಬಿಎಸ್‌ಪಿ ಮುಖಂಡರು ಒತ್ತಾಯಿಸಿದ್ದಾರೆ.
ಬಸವಕಲ್ಯಾಣ ತಹಶೀಲ್ದಾರ್ ವರ್ಗಾವಣೆಗೆ ಬಿಎಸ್‌ಪಿ ಒತ್ತಾಯ - ತಹಶೀಲ್ದಾರ್ ವರ್ಗಾವಣೆಗೆ ಬಿಎಸ್‌ಪಿ ಒತ್ತಾಯ
ಅಕ್ರಮ ಮರಳು ದಂಧೆ ತಡೆಯುವಲ್ಲಿ ವಿಫಲರಾದ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಬಿಎಸ್‌ಪಿ ಮುಖಂಡರು ಒತ್ತಾಯಿಸಿದ್ದಾರೆ.
ತಾಲೂಕಿನ ಮುಲ್ಲಾಮರಿ ಹಳ್ಳದಿಂದ ಅಕ್ರಮ ಮರಳು ಸಾಗಿಸಲಾಗುತ್ತಿದೆ ಎಂದು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಮಂಠಾಳಕರ್ ನೇತೃತ್ವದಲ್ಲಿ ಇಲ್ಲಿಯ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ತಾಲೂಕಿನ ಸುಂಠಾಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುಲ್ಲಾಮಾರಿ ಹಳ್ಳದಿಂದ ಕೆಲವರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಇದನ್ನು ತಡೆಯುವಂತೆ ಒತ್ತಾಯಿಸಿ ಕಳೆದ ಏ. 22ರಂದು ಗ್ರಾಮಸ್ಥರು ತಹಶೀಲ್ದಾರ್ ಸಾವಿತ್ರಿ ಸಲಗರ್ ಅವರಿಗೆ ದೂರು ಸಲ್ಲಿಸಿದ್ದರು.
ಗ್ರಾಮಸ್ಥರು ದೂರು ಸಲ್ಲಿಸಿದ ಮಾರನೇ ದಿನ ಪೊಲೀಸರೊಂದಿಗೆ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿದ್ದರು. ಅಕ್ರಮ ಮರಳು ಸಾಗಿಸುವ ವ್ಯಕ್ತಿಗಳು ಸ್ಥಳದಲ್ಲಿಯೇ ಇದ್ದರೂ ಕೂಡಾ ಅವರನ್ನು ಅವರನ್ನು ಬಂಧಿಸಿಲ್ಲ. ಅಕ್ರಮ ಮರಳು ಸಾಗಿಸುವವರನ್ನು ಶೀಘ್ರವಾಗಿ ಬಂಧಿಸುವ ಜೊತೆಗೆ ಕರ್ತವ್ಯಲೋಪ ಎಸಗಿರುವ ಸಾವಿತ್ರಿ ಸಲಗರ ಅವರನ್ನು ಇಲ್ಲಿಂದ ಬೇರೆ ಕಡೆಗೆ ವರ್ಗಾವಣೆಗೊಳಿಸಬೇಕು. ಸರ್ಕಾರ ತನಿಖಾ ತಂಡ ರಚಿಸಬೇಕು ಎಂದು ಸಹಾಯಕ ಆಯುಕ್ತರಿಗೆ ಬರೆದ ಮನವಿ ಪತ್ರದಲ್ಲಿ ಮಂಠಾಳಕರ ಒತ್ತಾಯಿಸಿದ್ದಾರೆ.