ETV Bharat Karnataka

ಕರ್ನಾಟಕ

karnataka

ETV Bharat / state

ಆಮ್ಲಜನಕ ಕೊರತೆಯಿಂದ ಬಿಎಸ್ಎಫ್ ಯೋಧ ಮೃತ - ಕಮಲನಗರ ತಾಲೂಕಿನ ಬೇಡಕುಂದಾ ಗ್ರಾಮ

ಜಮ್ಮು ಮತ್ತು ಕಾಶ್ಮೀರದಿಂದ ದೂರದಲ್ಲಿರುವ ಗುರೇಜ್​ ಪ್ರದೇಶದಲ್ಲಿ ಬಿಎಸ್​ಎಫ್​ ಯೋಧರೊಬ್ಬರು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ರಾಮದಾಸ್ ಧನರಾಜ್ ಚಂದಾಪುರೆ
ರಾಮದಾಸ್ ಧನರಾಜ್ ಚಂದಾಪುರೆ
author img

By

Published : Sep 26, 2022, 9:26 PM IST

ಬೀದರ್:​ಜಿಲ್ಲೆಯ ಕಮಲನಗರ ತಾಲೂಕಿನ ಬೇಡಕುಂದಾ ಗ್ರಾಮದ ಬಿಎಸ್​ಎಫ್ ಯೋಧನೊಬ್ಬರು ಆಮ್ಲಜನಕ ಕೊರತೆ ಮತ್ತು ಆರೋಗ್ಯದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದ ಘಟನೆ ಜಮ್ಮು ಕಾಶ್ಮೀರದಿಂದ 125 ಕಿ. ಮೀ ದೂರದ ಗುರೇಜ್ ಪ್ರದೇಶದಲ್ಲಿ ನಡೆದಿದೆ.

ರಾಮದಾಸ್ ಧನರಾಜ್ ಚಂದಾಪುರೆ (35) ಮೃತ ಯೋಧ. 2006 ರಲ್ಲಿ ಸೇನೆಗೆ ಸೇರಿದ್ದ ರಾಮದಾಸ್ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಇತ್ತೀಚಿಗೆ ಹೈದರಾಬಾದ್​ನಿಂದ ಗುರೇಜ್​ಗೆ ವರ್ಗಾವಣೆಯಾಗಿದ್ದರು.

ಇವರು ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಮೃತದೇಹವನ್ನು ವಿಶೇಷ ವಿಮಾನದ ಮೂಲಕ ಶ್ರೀನಗರದಿಂದ ಹೈದರಾಬಾದ್​ಗೆ ತರುತ್ತಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಇಂದು ರಾತ್ರಿ ಸ್ವಗ್ರಾಮಕ್ಕೆ ಸಾಗಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಓದಿ:ತುಮಕೂರಿನಲ್ಲಿ ವಿದ್ಯಾರ್ಥಿಯ ಮೊಬೈಲ್​ ಸಿಮ್ ಕದ್ದು ಹಣ ಲಪಟಾಯಿಸಿದ ದುಷ್ಕರ್ಮಿ

ABOUT THE AUTHOR

author-img

...view details