ಕರ್ನಾಟಕ

karnataka

ETV Bharat / state

ಬ್ರಿಮ್ಸ್ ನಿರ್ದೇಶಕ ಹುದ್ದೆಗೆ ಡಾ.ಶಿವಕುಮಾರ್ ರಾಜೀನಾಮೆ, ರಾಜಕೀಯ ಒತ್ತಡ ಕಾರಣ? - brims hospital

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್) ನಿರ್ದೇಶಕ ಹುದ್ದೆಗೆ ಏರಲು ಸಾಕಷ್ಟು ಲಾಬಿ ನಡೆಯುತ್ತಿರುವ ನಡುವೆ, ಹುದ್ದೆಯಲ್ಲಿ ಸೇವೆಯಲ್ಲಿದ್ದ ಡಾ. ಶಿವಕುಮಾರ್ ಏಕಾಏಕಿ ರಾಜೀನಾಮೆ ನೀಡಿದ್ದಾರೆ.

brims
brims

By

Published : Oct 13, 2020, 6:21 PM IST

ಬೀದರ್:ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸಮರ್ಥವಾಗಿ ಸೋಂಕು ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್) ನಿರ್ದೇಶಕ ಹುದ್ದೆಗೆ ಏರಲು ಸಾಕಷ್ಟು ಲಾಬಿ ನಡೆಯುತ್ತದೆ. ಈ ನಡುವೆ ನಿರ್ದೇಶಕರ ಹುದ್ದೆಯಲ್ಲಿ ಸೇವೆಯಲ್ಲಿದ್ದ ಡಾ. ಶಿವಕುಮಾರ್ ಏಕಾಏಕಿ ರಾಜೀನಾಮೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ.

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್)

ಸತತ 8 ತಿಂಗಳ ಕಾಲ ಸೇವೆ ಸಲ್ಲಿಸಿದ ಡಾ.ಶಿವಕುಮಾರ್ ಅವರಿಗೆ ರಾಜಕೀಯ ಒತ್ತಡ ಹಾಗೂ ವಿವಿಧ ಯೋಜನೆಗಳ ಅಡಿಯಲ್ಲಿ ಅಕ್ರಮ ಮಾಡಲು ಮಾಫಿಯಾವೊಂದು ಕಿರಿಕಿರಿ ನೀಡಿತ್ತು. ಈ ನಡುವೆ ಯಾರಿಗೂ ಹೇಳಲು ಆಗದೆ ಯಾರ ಮಾತು ಕೇಳಲಾಗದಷ್ಟು ಅಸಹಾಯಕ ಸ್ಥಿತಿ ಎದುರಾಗಿತ್ತು.

ಅಲ್ಲದೆ ಬ್ರಿಮ್ಸ್​ನಲ್ಲಿ ಕೆಲ ಸಿಬ್ಬಂದಿ ಹಾಗೂ ವೈದ್ಯರ ಅಸಹಕಾರ ಕೂಡ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಎಲ್ಲದಕ್ಕೂ ಬೇಸತ್ತು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details