ಕರ್ನಾಟಕ

karnataka

ETV Bharat / state

ಮಸೀದಿಗೆ ಬರಬೇಡಿ, ಮನೆಯಲ್ಲೇ ನಮಾಜ್​ ಮಾಡಿ: ತಹಶೀಲ್ದಾರ್​ ಆದೇಶ - Namaz at Chitguppa Mosque

ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಲು ಬ್ರೇಕ್ ಹಾಕಿ ಚಿಟಗುಪ್ಪ ತಹಶೀಲ್ದಾರ್ ಆದೇಶ ಹೊರಡಿಸಿದ್ದು, ಕೊರೊನಾ ರೋಗ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳಲ್ಲೂ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

Breakdown to Namaz at Chitguppa Mosque for Lockdown
ಲಾಕ್​ಡೌನ್ ಹಿನ್ನಲೆ ಚಿಟಗುಪ್ಪ ಮಸೀದಿಯಲ್ಲಿ ನಮಾಜ್​ಗೆ ಬ್ರೇಕ್...!

By

Published : Mar 27, 2020, 1:56 PM IST

ಬೀದರ್: ಕೊರೊನಾ ವೈರಸ್ ಸೋಂಕು ನಿಯಂತ್ರಣ ತರುವ ಹಿನ್ನಲೆಯಲ್ಲಿ ದೇಶದ್ಯಾಂತ ಲಾಕ್​ಡೌನ್ ಘೋಷಣೆ ಮಾಡಲಾಗಿದ್ದು, ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಲು ಬ್ರೇಕ್ ಹಾಕಿ ಚಿಟಗುಪ್ಪ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ತಹಶೀಲ್ದಾರ್ ಆದೇಶ

ಜಿಲ್ಲೆಯ ಚಿಟಗುಪ್ಪ ಪಟ್ಟಣದ ಮಸೀದಿ ಎದುರು ರಾಜ್ಯ ಅಲ್ಪ ಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ ಇಲಾಖೆ ಕಾರ್ಯದರ್ಶಿ ಅವರ ಸೂತ್ತೊಲೆ ಹಿನ್ನಲೆಯಲ್ಲಿ ತಹಶೀಲ್ದಾರ ಜೀಯಾವುಲ್ಲಾ ಅವರು ಈ ಆದೇಶ ಹೊರಡಿಸಿದ್ದು, ಎಲ್ಲಾ ಮಸೀದಿಗಳ ಮುಂದೆ ಪ್ರತಿಯನ್ನು ಅಂಟಿಸಿದ್ದಾರೆ.

ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದು, ಈ ನಿಟ್ಟಿನಲ್ಲಿ ಕೊರೊನಾ ರೋಗ ನಿಯಂತ್ರಣಕ್ಕೆ ತಂದು ಜನರು ಸಾಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳಲ್ಲೂ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details