ಬಸವಕಲ್ಯಾಣ: ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಬಸವಕಲ್ಯಾಣ: ಚಾಕುವಿನಿಂದ ಇರಿದು ಯುವಕನ ಕೊಲೆ - ಬಸವಕಲ್ಯಾಣದಲ್ಲಿ ಯುವಕನ ಕೊಲೆ ಲೆಟೆಸ್ಟ್ ನ್ಯೂಸ್
ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
![ಬಸವಕಲ್ಯಾಣ: ಚಾಕುವಿನಿಂದ ಇರಿದು ಯುವಕನ ಕೊಲೆ ಚಾಕುವಿನಿಂದ ಇರಿದು ಯುವಕನ ಕೊಲೆ](https://etvbharatimages.akamaized.net/etvbharat/prod-images/768-512-5274644-thumbnail-3x2-karwar.jpg)
Boy murder in Basavakalyan
ಚಾಕುವಿನಿಂದ ಇರಿದು ಯುವಕನ ಕೊಲೆ
ಶಾ ನಗರ ಬಡಾವಣೆಯ ಅಲ್ಲಾವುದ್ದೀನ್ ಇಸ್ಮಾಯಿಲ್ ಸಾಬ್(24) ಕೊಲೆಯಾದ ಯುವಕ. ನಗರದ ಹರಳಯ್ಯ ಗವಿ ಮುಂಭಾಗದಲ್ಲಿರುವ ಕಠಾರೆ ಲೇಔಟ್ನಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಲಾಗಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ವಿಷಯ ತಿಳಿದು ನಗರ ಠಾಣೆ ಪಿಎಸ್ಐ ಸುನೀಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕೊಲೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಕೈಗೊಂಡಿದ್ದಾರೆ.