ಕರ್ನಾಟಕ

karnataka

By

Published : Apr 27, 2020, 1:40 AM IST

Updated : Apr 27, 2020, 9:42 AM IST

ETV Bharat / state

ಬೀದರ್​ನ ಕೊರೊನಾ ಹಾಟ್​ಸ್ಪಾಟ್​ನಲ್ಲಿ ಶಾಸಕ ರಹಿಂಖಾನ್​ಗೆ ದಿಗ್ಬಂಧನ... ನಡೆದಿದ್ದಾದರೂ ಏನು?

ಓಲ್ಡ್ ಸಿಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಶಂಕಿತರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಇವರನ್ನು ಭೇಟಿ‌ ಮಾಡಲು ಬಂದಿದ್ದ ಶಾಸಕ ರಹಿಂಖಾನ್​ ಅವರನ್ನು ನೂರಾರು ಜನ ಆಸ್ಪತ್ರೆ ಮುಂದೆ ಜಮಾಯಿಸಿ ಅಡ್ಡಗಟ್ಟಿದ್ದಾರೆ. ಅಲ್ಲದೆ, ಅವರ ವಿರುದ್ಧ ವಾಗ್ದಾಳಿ ನಡೆಸಿ ಧಿಕ್ಕಾರ ಕೂಗಿದ್ದಾರೆ ಎನ್ನಲಾಗ್ತಿದೆ.

Bidar's Hotspot
ಬೀದರ್​ನ ಹಾಟ್​ಸ್ಪಾಟ್

ಬೀದರ್:ಕೊರೊನಾ ಹರಡುವಿಕೆ ನಿಯಂತ್ರಿಸಲು ವಿಧಿಸಲಾಗಿರುವ ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರದ ಓಲ್ಡ್ ಸಿಟಿಯ ನಿವಾಸಿಗರಿಗೆ ನೀರು, ತರಕಾರಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ಲಭ್ಯವಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳನ್ನು ಕೇಳಿದರೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ ಜನರು, ಶಾಸಕ ರಹಿಂಖಾನ್ ಅವರಿಗೆ ದಿಗ್ಬಂಧನ ಹಾಕಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಓಲ್ಡ್ ಸಿಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಇವರನ್ನು ಭೇಟಿ‌ ಮಾಡಲು ಬಂದಿದ್ದ ಶಾಸಕ ರಹಿಂಖಾನ್​ ಅವರನ್ನು ನೂರಾರು ಜನ ಆಸ್ಪತ್ರೆ ಮುಂದೆ ಜಮಾಯಿಸಿ ಅಡ್ಡಗಟ್ಟಿದ್ದಾರೆ. ಅಲ್ಲದೆ, ಅವರ ವಿರುದ್ಧ ವಾಗ್ದಾಳಿ ನಡೆಸಿ, ಧಿಕ್ಕಾರ ಕೂಗಿದ್ದಾರೆ ಎನ್ನಲಾಗ್ತಿದೆ.

ಬೀದರ್​ನ ಕೊರೊನಾ ಹಾಟ್​ಸ್ಪಾಟ್​ನಲ್ಲಿ ಶಾಸಕ ರಹಿಂಖಾನ್​ಗೆ ದಿಗ್ಬಂಧನ.

ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾದ ಕಾರಣ ಜಿಲ್ಲಾಡಳಿತ ನಗರದ ಓಲ್ಡ್ ಸಿಟಿಯನ್ನು ಸೀಲ್​ಡೌನ್ ಮಾಡಿತ್ತು. ಇದರಿಂದಾಗಿ ಜನರಿಗೆ ಕುಡಿಯುವ ನೀರು, ಆಹಾರ ಧಾನ್ಯ, ತರಕಾರಿ ಸೇರಿದಂತೆ ಇತರೆ ಅಗತ್ಯ ವಸ್ತಗಳು ಲಭ್ಯವಾಗುತ್ತಿಲ್ಲ. ಜನರು ಸಂಕಷ್ಟದಿಂದ ನಿತ್ಯ ಬಳಲುತ್ತಿದ್ದರೂ ಈ ಬಗ್ಗೆ ಕೇಳಲು ಬರಲಿಲ್ಲ. ಈಗ ಏಕೆ ಇಲ್ಲಿಗೆ ಬರುತ್ತಿದ್ದೀರಾ ಎಂದು ಸ್ಥಳೀಯರು ಶಾಸಕರಿಗೆ ಪ್ರಶ್ನಿಸಿದ್ದಾರೆ.

ಸುಮಾರು ಒಂದು ಗಂಟೆ ಕಾಲ ಆಸ್ಪತ್ರೆಯಲ್ಲಿದ್ದ ಶಾಸಕರನ್ನು ಹೊರಗಡೆ ಬರುವಂತೆ ಸ್ಥಳದಲ್ಲಿ ಜಮಾಯಿಸಿದ್ದ ಜನ ಆಕ್ರೋಶ ವ್ಯಕ್ತಡಿಸಿದರು. ಪರಿಸ್ಥಿತಿ ಕೈಮಿರುವ ಹಂತಕ್ಕೆ ತಲುಪುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆಕ್ರೋಶಗೊಂಡಿದ್ದ ಜನರನ್ನು ಸಮಾಧಾನಪಡಿಸಿದ್ದಾರೆ. ಬಳಿಕ ಶಾಸಕರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಬಸವೇಶ್ವರ ಹೀರಾ, ಸಿಪಿಐ ರಾಜಣ್ಣ, ಶ್ರೀಕಾಂತ ಅಲ್ಲಾಪೂರೆ, ಪಿಎಸ್​ಐಗಳಾದ ಗುರು ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿದ್ದರು.

Last Updated : Apr 27, 2020, 9:42 AM IST

ABOUT THE AUTHOR

...view details