ಬೀದರ್:ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೇವಲವಾಗಿ ಮಾತನಾಡಿದ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ಗೆ ಬಿಜೆಪಿ ಸಂಸದ ಭಗವಂತ ಖೂಬಾ ಏಕವಚನದಲ್ಲೇ ಜವಾಬು ನೀಡಿದ್ದಾರೆ.
ನಾಲಿಗೆ ಹರಿಬಿಟ್ಟ ಶಾಸಕನಿಗೆ ಬೀದರ್ ಸಂಸದರ ಏಕವಚನದ ಜವಾಬು!
ಸಂಸದ ಭಗವಂತ ಖೂಬಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಏ. ನಾರಾಯಣರಾವ್ ಇಂತಹ ಮಾತಾಡಿದ್ರೆ ಜನ ಕಪಾಳಕ್ಕೆ ಹೊಡಿತಾರೆ. ಮಕ್ಕಳನ್ನು ಹೆರೋದರಿಂದ ಪುರುಷಾರ್ಥ ಸಾಬೀತಾಗಲ್ಲ. ನಿಮ್ಮ ನೀಚ ಮಾತುಗಳಿಗೆ ಜನರೇ ಉತ್ತರಿಸುತ್ತಾರೆ ಎಂದು ಟಾಂಗ್ ನೀಡಿದ್ದಾರೆ.
ಸಂಸದ ಭಗವಂತ ಖೂಬಾ
ಪ್ರಧಾನಿ ನರೇಂದ್ರ ಮೋದಿಗೆ ಮದುವೆಯಾದರೂ ಮಕ್ಕಳಾಗೊಲ್ಲ ಎಂದು ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಇತ್ತೀಚೆಗೆ ನಾಲಿಗೆ ಹರಿಬಿಟ್ಟಿದ್ದರು.
ಇದಕ್ಕೆ ಪ್ರತಿಯಾಗಿ ಬೀದರ್ ಸಂಸದ ಭಗವಂತ ಖೂಬಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಾಕುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. 'ಏ. ನಾರಾಯಣರಾವ್ ಇಂಥ ಮಾತಾಡಿದ್ರೆ ಜನ ಕಪಾಳಕ್ಕೆ ಹೊಡೀತಾರೆ. ಮಕ್ಕಳ ಹೆರೋದರಿಂದ ಪುರುಷಾರ್ಥ ಸಾಬೀತಾಗಲ್ಲ ನಿಮ್ಮ ನೀಚ ಮಾತುಗಳಿಗೆ ಜನರೇ ಉತ್ತರಿಸುತ್ತಾರೆ' ಎಂದು ಬರೆದಿದ್ದಾರೆ.