ಬೀದರ್:ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಬ್ರೀಮ್ಸ್ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಮಳೆ ಗಾಳಿಗೆ ಕಟ್ಟಡದ ಮೇಲ್ಚಾವಣಿ ಕುಸಿದು ಅವಘಡ ಸಂಭವಿಸಿದೆ. ಇದು ಮೈತ್ರಿ ಸರ್ಕಾರದ ವೈಫಲ್ಯವನ್ನ ತೋರಿಸುತ್ತಿದ್ದು, ಈ ಕುರಿತು ಮೌನವಹಿಸಿದ ಅಧಿಕಾರಿಗಳಿಗೆ ಬಿಜೆಪಿ ಸಂಸದ ಭಗವಂತ ಖೂಬಾ ಅವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಬಿರುಗಾಳಿ ಮಿಶ್ರಿತ ಮಳೆಗೆ ಬ್ರೀಮ್ಸ್ ಆಸ್ಪತ್ರೆಯ ಮೇಲ್ಚಾವಣಿ ಕುಸಿದು ಅವಘಡ ಸಂಭವಿಸಿತ್ತು. ತಡರಾತ್ರಿ ಈ ಘಟನೆ ನಡೆದಿರುವುದರಿಂದ ಭಾರಿ ದುರಂತವೊಂದು ತಪ್ಪಿತ್ತು. ಮಾಜಿ ಸಿಎಂ ಸಿದ್ದರಾಮಯ್ಯನವರ 200 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದರು. ಕಟ್ಟಡ ನಿರ್ಮಾಣವಾದಾಗಿನಿಂದಲೂ ಒಂದಲ್ಲ ಒಂದು ದುರಂತ ನಡೆಯುತ್ತಲೇ ಇದ್ದು, ಅಪೂರ್ಣ ಕಾಮಗಾರಿ, ಲಿಫ್ಟ್ನಲ್ಲಿ ರೋಗಿಗಳ ಸಿಲುಕಿ ಒದ್ದಾಡಿದ್ದು ಸೇರಿದಂತೆ ಬ್ರೀಮ್ಸ್ ಆಸ್ಪತ್ರೆ ದಿನಕ್ಕೊಂದು ಅವಾಂತರಕ್ಕೆ ತುತ್ತಾಗುತ್ತಿದೆ.