ಕರ್ನಾಟಕ

karnataka

ETV Bharat / state

ಬಿಜೆಪಿಯವರದ್ದು ಬ್ರಿಟಿಷ್ ಪಾಲಿಸಿ: ಬೃಂದಾ ಕಾರಟ್ ವಾಗ್ದಾಳಿ...! - Brinda Karat press meet

ದೆಹಲಿಯ ಬಹಿರಂಗ ಸಮಾವೇಶದಲ್ಲಿ ಗುಂಡು ಹೊಡೆಯುವಂತೆ ಹೇಳಿದ ಬಿಜೆಪಿ ನಾಯಕನ ವಿರುದ್ಧ ಯಾವುದೇ ಎಫ್​ಐಆರ್​ ದಾಖಲಾಗಿಲ್ಲ. ನಾಟಕ ಪ್ರದರ್ಶನದಲ್ಲಿ ಮುಗ್ದ ಹುಡಿಗಿ ಆಡಿದ ಮಾತಿಗೆ, ಶಿಕ್ಷಕಿ ಹಾಗೂ ಮಗುವಿನ ತಾಯಿಯನ್ನು ಬಂಧಿಸಿದೆ. ಬಿಜೆಪಿಯದು ಬ್ರಿಟಿಷ್​ ಪಾಲಸಿ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

BJP implemented  British Policy: Brinda Karat Barred
ಸಿಪಿಎಂ ನಾಯಕಿ ಮೃಂದಾ ಕಾರಟ್​

By

Published : Feb 13, 2020, 7:50 PM IST

Updated : Feb 13, 2020, 8:31 PM IST

ಬೀದರ್: ದೆಹಲಿಯ ಬಹಿರಂಗ ಸಮಾವೇಶದಲ್ಲಿ ಗುಂಡು ಹೊಡೆಯುವಂತೆ ಹೇಳಿದ ಬಿಜೆಪಿ ನಾಯಕನ ವಿರುದ್ಧ ಯಾವುದೇ ಎಫ್​ಐಆರ್​ ದಾಖಲಾಗಿಲ್ಲ. ನಾಟಕ ಪ್ರದರ್ಶನದಲ್ಲಿ ಮುಗ್ದ ಹುಡಿಗಿ ಆಡಿದ ಮಾತಿಗೆ, ಶಿಕ್ಷಕಿ ಹಾಗೂ ಮಗುವಿನ ತಾಯಿಯನ್ನು ಬಂಧಿಸಿದೆ. ಬಿಜೆಪಿಯದು ಬ್ರಿಟಿಷ್​ ಪಾಲಿಸಿ ಎಂದು ಸಿಪಿಎಂ ನಾಯಕಿ ಬೃಂದಾ ಕಾರಟ್​ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಸಿಪಿಎಂ ನಾಯಕಿ ಬೃಂದಾ ಕಾರಟ್​

ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ಶಾಹಿನ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಸಿಎಎ ವಿರೋಧಿಸಿ ನಡೆದ ನಾಟಕದಲ್ಲಿ ಪಾತ್ರ ನಿರ್ವಹಿಸಿದ ಬಾಲಕಿಯ ತಾಯಿಯನ್ನು ಭೇಟಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಇಲ್ಲೊಂದು ಶಾಲೆಯಲ್ಲಿ ಸಣ್ಣದೊಂದು ಪಾತ್ರ ಮಾಡಿದ ಬಾಲಕಿಯ ಘಟನೆಯನ್ನು ದೊಡ್ಡದಾಗಿ ಮಾಡಿ, ಕೇಸ್ ದಾಖಲಿಸಿದೆ. ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವರ್ತನೆ ಬ್ರಿಟಿಷ್ ನೀತಿಯಂತಿದೆ ಎಂದು ದೂರಿದರು.

Last Updated : Feb 13, 2020, 8:31 PM IST

ABOUT THE AUTHOR

...view details