ಬಸವಕಲ್ಯಾಣ:ಇಲ್ಲಿಯ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಮಡೋಳಪ್ಪ ಪಿಎಸ್ ಅವರಿಂದ ತೆರವಾದ ಸ್ಥಾನಕ್ಕೆ ಬೀರೇಂದ್ರಸಿಂಗ್ ಠಾಕೂರ ಅವರನ್ನು ನೇಮಿಸಲಾಗಿದೆ.
ಬೀರೇಂದ್ರಸಿಂಗ್ ಠಾಕೂರ ಅವರು ಬೀದರ್ ಜಿಪಂ ಸಹಾಯಕ ಕಾರ್ಯದರ್ಶಿಯಾಗಿದ್ದರು. ಇದೀಗ ಇವರನ್ನು ತಾಲೂಕು ಪಂಚಾಯಿತಿಗೆ ನೇಮಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.