ಬಸವಕಲ್ಯಾಣ: ಬೈಕ್ಗೆ ಕಾರು ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿನ ಸಸ್ತಾಪುರ ಬಂಗ್ಲಾ ಸಮಿಪದ ರಾಷ್ಟ್ರೀಯ ಹೆದ್ದಾರಿ 65ರ ಮುಡಬಿ ಕ್ರಾಸ್ ಬಳಿ ನಡೆದಿದೆ.
ತಾಲೂಕಿನ ಗೌರ ಗ್ರಾಮದ ಚನ್ನಬಸಪ್ಪ ಚೆಟ್ಟಪ್ಪ (45) ಹಾಗೂ ಉಮರ್ಗಾ ನಿವಾಸಿಯಾದ ಬಾಲಾಜಿ ಘಂಟೆ (42) ಘಟನೆಯಲ್ಲಿ ಮೃತಪಟ್ಟವರು ಎನ್ನಲಾಗಿದೆ.
ರಸ್ತೆ ಅಪಘಾತದಲ್ಲಿ ಸವಾರರಿಬ್ಬರು ಸ್ಥಳದಲ್ಲೇ ಸಾವು ಲಾರಿ ಉದ್ಯಮ ಸಂಬಂಧದ ಬಂಗ್ಲಾ ಬಳಿಯ ಆಟೋ ನಗರಕ್ಕೆ ಆಗಮಿಸಿ ಮರಳಿ ಗೌರ ಗ್ರಾಮಕ್ಕೆ ತೆರಳುವಾಗ ಮುಡಬಿ ಕ್ರಾಸ್ ಬಳಿ ಹೈದರಾಬಾದ್ ಕಡೆಯಿಂದ ವೇಗವಾಗಿ ಆಗಮಿಸಿದ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಸಿಪಿಐ ಜೆ.ಎಸ್.ನ್ಯಾಮಗೌಡರ, ಸಂಚಾರಿ ಠಾಣೆ ಪಿಎಸ್ಐ ಬಸಲಿಂಗಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರ ಅಸ್ತವ್ಯಸ್ಥ : ಮುಡಬಿ ಕ್ರಾಸ್ ಬಳಿ ಅಪಘಾತ ನಡೆದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಕೆಲ ಕಾಲ ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸ್ಥಳಕ್ಕೆ ಆಗಮಿಸಿದ ಸಂಚಾರಿ ಹಾಗೂ ಹೈವೆ ಪೊಲೀಸರು ವಾಹನಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.