ಬೀದರ್ :ದೇವರ ಹರಕೆ ತೀರಿಸಲು ತೆರಳಿದ್ದ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೀದರ್ ತಾಲೂಕಿನ ಕಾಗವಾಡ ಗ್ರಾಮದ ಬಳಿ ನಡೆದಿದೆ.
ಬೀದರ್ ತಾಲೂಕಿನ ಕಾಗವಾಡ ಗ್ರಾಮದ ಬಳಿ ಬೈಕ್ ಮುಖಾಮುಖಿ ಢಿಕ್ಕಿ ಮೂರು ತಿಂಗಳ ಹಿಂದೆ ಕಳೆದು ಹೋದ ಬೈಕ್ ಮರಳಿ ಸಿಕ್ಕ ಸಂತಸದಲ್ಲಿ ಮುಸ್ತರಿ ಗ್ರಾಮ ಎಸಮ್ಮ ದೇವರ ಹರಕೆ ತೀರಿಸಲು ಯುವಕ ಬೈಕ್ನಲ್ಲಿ ತೆರಳಿದ್ದನು ಎನ್ನಲಾಗಿದೆ. ಈ ವೇಳೆ ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯುವಕ ಕೊನೆಯುಸಿರೆಳೆದಿದ್ದಾನೆ.
ಮೃತಪಟ್ಟ ಯುವಕ ಬೀದರ್ ನಗರದ ಮಿರಾ ಗಂಜ್ ನಿವಾಸಿ ಎಂದು ಗುರುತಿಸಲಾಗಿದೆ. ಮತ್ತೊಂದು ಬೈಕ್ನಲ್ಲಿ ತೆರಳುತ್ತಿದ್ದವರು ಸಿರ್ಸಿ ಗ್ರಾಮದವರು ಎನ್ನಲಾಗುತ್ತಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೆಲ್ಮೆಟ್ ಧರಿಸದೇ ಸವಾರಿ :ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಇರುವುದರಿಂದ ಜೀವ ಹಾನಿಯಾಗಿದೆ ಎನ್ನಲಾಗಿದೆ. ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆದರೆ, ಸ್ಥಳೀಯರು ವಿಡಿಯೋ ಮಾಡುವುದರಲ್ಲಿ ತೊಡಗಿದ್ದರು.
ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡದಿರುವುದು ಅಮಾನವೀಯ ಮನಸ್ಥಿತಿ ಎತ್ತಿ ತೋರಿಸುತ್ತಿತ್ತು.