ಬಸವಕಲ್ಯಾಣ: ಖಾಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಪರಿಣಾಮ ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿ, ಐವರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ನಗರದ ಹರಳಯ್ಯ ವೃತ್ತದಲ್ಲಿ ನಡೆದಿದೆ.
ನಗರದ ಕೈಕಾಡಿಗಲ್ಲಿಯ ವಿಶ್ವನಾಥ ಅನೀಲ ಮಾನೆ, ಸೋಹೆಲ್, ಸಾಗರ್, ಮಹೇಶ ಘಟನೆಯಲ್ಲಿ ಗಾಯಗೊಂಡ ಯುವಕರು. ಕರ್ಫ್ಯೂ ನಿಮಿತ್ತ ನಗರದ ಮುಖ್ಯ ರಸ್ತೆಯಲ್ಲಿ ಜನ ಸಂಚಾರವಿಲ್ಲದೆ ರಸ್ತೆಗಳೆಲ್ಲ ಖಾಲಿ, ಖಾಲಿಯಾಗಿದ್ದವು. ಈ ವೇಳೆ ಒಂದೇ ಬೈಕ್ ಮೇಲೆ ಮೂವರು ಕುಳಿತು ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸುತ್ತ ಬಂದ ಯುವಕರು, ಎದುರಿಗೆ ಬಂದ ಮತ್ತೊಂದು ಬೈಕ್(ಬುಲೆಟ್)ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಐವರಿಗೆ ಘಟನೆಯಲ್ಲಿ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.