ಬೀದರ್ : ಚುನಾವಣಾ ಆಯೋಗದ ನಿರ್ದೇಶನದಂತೆ ಪತದಾರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಅಕ್ಟೋಬರ್ 15 ರೋಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಮತದಾರ ಪಟ್ಟಿಯಿಂದ ನಿಮ್ಮ ಹೆಸರು ನಾಪತ್ತೆಯಾಗಬಹುದು ಎಂದು ಬೀದರ್ ಜಿಲ್ಲಾಧಿಕಾರಿ ಡಾ. ಎಚ್. ಆರ್ ಮಹಾದೇವ್ ಎಚ್ಚರಿಕೆ ನೀಡಿದ್ದಾರೆ.
ಹೀಗೆ ಮಾಡದಿದ್ದರೆ ಮತದಾರ ಪಟ್ಟಿಯಿಂದ ನಿಮ್ಮ ಹೆಸರು ಹೋಗುತ್ತೆ ಎಚ್ಚರ: ಬೀದರ್ ಡಿಸಿ...! - ಬೀದರ್ ಜಿಲ್ಲಾ ಸುದ್ದಿ
ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಜಾರಿಯಲ್ಲಿದೆ. ಬಿಎಲ್ಒ ಗಳು, ಅಂಗನವಾಡಿ ಕಾರ್ಯಕರ್ತೆಯರು ಅಥವಾ ಪಂಚಾಯತ್ ನೌಕರರು ಈ ಕೆಲಸ ನಿರ್ವಹಿಸುತ್ತಿದ್ದಾರೆ. ಮತದಾರರು ಮತದಾನ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯೊಂದಿಗೆ ಪಡಿತರ ಚೀಟಿ, ಅಥವಾ ಆಧಾರ ಕಾರ್ಡ್ ಪ್ರತಿ ಸಲ್ಲಿಸಬೇಕಾಗಿದೆ.
ಜಿಲ್ಲಾಧಿಕಾರಿ ಡಾ. ಎಚ್. ಆರ್ ಮಹಾದೇವ್
ಈ ಕುರಿತು 'ಈಟಿವಿ ಭಾರತ' ಜತೆ ಮಾತನಾಡಿದ ಅವರು ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಜಾರಿಯಲ್ಲಿದೆ. ಬಿಎಲ್ಒಗಳು, ಅಂಗನವಾಡಿ ಕಾರ್ಯಕರ್ತೆಯರು ಅಥವಾ ಪಂಚಾಯತ್ ನೌಕರರು ಈ ನಿರ್ವಹಿಸುತ್ತಿದ್ದಾರೆ. ಮತದಾರರು ಮತದಾನ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯೊಂದಿಗೆ ಪಡಿತರ ಚೀಟಿ, ಅಥವಾ ಆಧಾರ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕಾಗಿದೆ.
ಈ ರೀತಿ ದಾಖಲೆಗಳು ಕೊಡದೇ ಇದ್ದಾಗ ಮತದಾರ ಪಟ್ಟಿಯಿಂದ ಹೆಸರು ಡಿಲಿಟ್ ಆಗಬಹುದು. ಹೀಗಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರು ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.