ಬೀದರ್: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರಿಗೆ ನಡುರಾತ್ರಿ ಕರೆಮಾಡಿ, ರಸಗೊಬ್ಬರ ಕೊರತೆ ನೀಗಿಸಲು ಆಗ್ರಹಿಸಿ, ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಕುಶಾಲ ಪಾಟೀಲ್ ಎಂಬುವರನ್ನು ಅಮಾನತುಗೊಳಿಸಿ ಡಿಡಿಪಿಐ ಗಣಪತಿ ಬಾರಾಟಕೆ ಆದೇಶಿಸಿದ್ದಾರೆ.
ಜೂನ್ 10ರ ರಾತ್ರಿ ಔರಾದ ತಾಲೂಕಿನ ಜೀರ್ಗಾ ಕೆ. ಸರ್ಕಾರಿ ಶಾಲಾ ಶಿಕ್ಷಕ ಕುಶಾಲ್ ಪಾಟೀಲ್ ಸ್ವಗ್ರಾಮ ಹೆಡಗಾಪೂರದಲ್ಲಿ ರಸಗೊಬ್ಬರ ಕೊರತೆಯಾಗಿದೆ ಎಂದು ಮೊಬೈಲ್ ಕರೆಯಲ್ಲಿ ವಾಗ್ವಾದ ಮಾಡಿ ಏಕವಚನದಲ್ಲಿ ಮಾತನಾಡಿದ್ದ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಷಯ ರೈತರನ್ನೂ ಕೆರಳಿಸಿತ್ತಲ್ಲದೆ ವಿರೋಧ ಪಕ್ಷ ಕಾಂಗ್ರೆಸ್ಗೆ ದಾಳವಾಗಿ ಪರಿಣಮಿಸಿ, ರಸಗೊಬ್ಬರ ಕೊರತೆ ಹೇಳಿಕೊಂಡ ರೈತನಿಗೆ ಸಚಿವರು ಅನುಚಿತವಾಗಿ ವರ್ತಿಸಿದ್ದು, ಸರಿಯಲ್ಲ ಎಂದು ಸುದ್ದಿಗೋಷ್ಠಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.