ಬೀದರ್:ಗಡಿ ಜಿಲ್ಲೆ ಬೀದರ್ನ ಭಾಲ್ಕಿ ತಾಲೂಕಿನ ಕುಂಟೆಸಿರ್ಸೆ ಗ್ರಾಮದ ವೇದಾಂತ ಅಲ್ಲಮಪ್ರಭು ಆನಂದವಾಡಿ ಹಾಗೂ ಅವರ ಐದು ಜನರ ತಂಡ ವಿಶ್ವದ ಅತ್ಯುತ್ತಮ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಯೊಡ್ಡಿ 2022ರ ಯಂಗ್ ಅರ್ಥ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಗ್ಲೋಬಲ್ ಚಾಂಪ್ಸ್ ಆಗಿ ಹೊರಹೊಮ್ಮಿದ್ದಾರೆ.
ಈ ವಿದ್ಯಾರ್ಥಿಗಳು ಹೈದರಾಬಾದ್ನ ಮಹೀಂದ್ರ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಪ್ಯಾರಿಸ್‌ನಲ್ಲಿರುವ ಯುನೆಸ್ಕೋ ಪ್ರಧಾನ ಕಚೇರಿಯಿಂದ ಪ್ರಶಸ್ತಿ ಜೊತೆಗೆ ನಗದು ಹಣವನ್ನೂ ಸ್ವೀಕರಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳ ಸಾಧನೆಗೆ ಪಂಚಮಸಾಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಂಭಿನಂದಿಸಿದ್ದಾರೆ.
ಗ್ಲೋಬಲ್ ಚಾಂಪ್ಸ್: ಹಳ್ಳಿ ಮಕ್ಕಳ ಮುಡಿಗೆ ಚಾಂಪಿಯನ್ ಕಿರೀಟ ಈ ವಿದ್ಯಾರ್ಥಿಗಳು ಪ್ರವಾಹದಿಂದ ನಾಶವಾಗದ ಮನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಈ ಒಂದು ಸ್ಪರ್ಧೆಯಲ್ಲಿ ವಿಶ್ವದ 500ಕ್ಕೂ ಹೆಚ್ಚು ಅತ್ಯುತ್ತಮ ಕಾಲೇಜುಗಳು, 15ಕ್ಕೂ ಹೆಚ್ಚು ವಿಶ್ವದ ಟಾಪ್ 15ರಲ್ಲಿ ಗುರುತಿಸಿಕೊಂಡಿದ್ದ ವಿಶ್ವವಿದ್ಯಾಲಯಗಳ ಮಕ್ಕಳು ಭಾಗವಹಿಸಿದ್ದರು.
ಬೀದರ್ ಮೂಲದ ವಿದ್ಯಾರ್ಥಿ ವೇದಾಂತ್ ಡಾ. ಪ್ರಭು ಮತ್ತು ಡಾ. ವಿಜಯಲಕ್ಷ್ಮಿ ಆನಂದವಾಡೆ ಅವರ ಮಗ. ಈ ಬೀದರ್ ಮೂಲದ ವೇದಾಂತ್ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಈ ಯಂಗ್ ಅರ್ಥ್ ಚಾಂಪಿಯನ್ಶಿಪ್ ಗೆದ್ದುಕೊಂಡ ಮೊದಲ ವಿದ್ಯಾರ್ಥಿಯಾಗಿದ್ದಾನೆ.
ಇದನ್ನೂ ಓದಿ:ಎಸ್.ಎಂ.ಕೆ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ