ಬೀದರ್: ದೆಹಲಿ ಜಮಾಅತ್ ಗೆ ಹೋಗಿ ಬಂದ 14 ಜನರಲ್ಲಿ ಕೋವಿಡ್ -19 ಸೋಂಕು ದೃಢವಾದ ಹಿನ್ನೆಲೆಯಲ್ಲಿ ಬೀದರ್ ನಗರದ ಓಲ್ಡ್ ಸಿಟಿ ರೆಡ್ ಝೋನ್ ಎಂದು ಘೋಷಣೆಯಾದ ಬಳಿಕ ಸಂಪೂರ್ಣವಾಗಿ ಸ್ತಬ್ಧವಾಗಿದೆ.
ಲಾಕ್ಡೌನ್ ಸಮಯ: ಡ್ರೋನ್ ಕ್ಯಾಮರಾದಲ್ಲಿ ಬಿಸಿಲ ನಗರಿ ಬೀದರ್ ಕಂಡಿದ್ದು ಹೀಗೆ - ಕೊವಿಡ್ -19
ಸದಾ ಜನಸಂದಣಿ, ಸಾರಿಗೆ ಸಂಚಾರ, ವ್ಯಾಪಾರ ವಹಿವಾಟಿನ ಕೇಂದ್ರವಾದ ಬೀದರ್ನ ಓಲ್ಡ್ ಸಿಟಿ ಈಗ ಖಾಲಿ ಖಾಲಿ ಕಾಣುತ್ತಿದೆ. ಈ ದೃಶ್ಯವನ್ನು ಡ್ರೋನ್ ಕಾಮರಾದಲ್ಲಿ ಸೆರೆ ಹಿಡಿಯಲಾಗಿದೆ.
ಡ್ರೋನ್ ಕ್ಯಾಮೆರಾದಲ್ಲಿ ಬೀದರ್
ನಗರದ ಬಹುಮನಿ ಸುಲ್ತಾನರ ಕೋಟೆ, ಗವಾನ್ ಮದರಸಾ, ಚೌಬಾರ್, ನಯಾಕಮಾನ್, ದುಲ್ಹನ್ ದರ್ವಾಜಾ, ಫತ್ತೆ ದರ್ವಾಜಾ, ದೆಹಲಿ ದರ್ವಾಜಾ, ಶಹಗಂಜ್ ಸೇರಿದಂತೆ ಸೋಂಕು ಪೀಡಿತ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಜಿಲ್ಲಾಡಳಿತ ಜನರಿಗೆ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳುತ್ತಿದೆ.
ಸದಾ ಜನಸಂದಣಿ, ಸಾರಿಗೆ ಸಂಚಾರ, ವ್ಯಾಪಾರ ವಹಿವಾಟಿನ ಕೇಂದ್ರವಾದ ಓಲ್ಡ್ ಸಿಟಿ ಈಗ ಬಿಕೋ ಎನ್ನುತ್ತಿದೆ. ಬಹುಮನಿ ಸುಲ್ತಾನರು, ನಿಜಾಮರು ಆಳಿದ ನಾಡಿನ ಕೋಟೆ ಆವರಣದಲ್ಲಿ ವ್ಯಾಪಿಸಿರುವ ಬೀದರ್ ನಗರದ ಓಲ್ಡ್ ಸಿಟಿಯ ಸ್ತಬ್ಧ ಚಿತ್ರಣ ಡ್ರೋನ್ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.