ಕರ್ನಾಟಕ

karnataka

ETV Bharat / state

ಇಲ್ಲಿ 'ಪ್ರಭು' ಅಲ್ಲಿ 'ಭಗವಂತ'.. ಇಬ್ಬರಿಗೂ ಮಂತ್ರಿ ಭಾಗ್ಯ: ಕಲ್ಲರಳಿ ಹೂವಾದ ಕಥೆ ರೋಚಕ - Bidar

ಸಾಮಾನ್ಯ ಕಾರ್ಯಕರ್ತನಂತೆ ಕ್ಷೇತ್ರದ ಲೆಕ್ಕಾಚಾರ ಹಾಕಿಕೊಟ್ಟು ದಿಗ್ಗಜ ನಾಯಕರನ್ನು ಸೋಲಿಸಿ ಪ್ರಭು ಚವ್ಹಾಣ ಅವರ ಗೆಲುವಿಗೆ ಸಾಕ್ಷಿಯಾದರು. ಚವ್ಹಾಣ ಅವರ ಸತತ 3ನೇ ಬಾರಿಯ ಗೆಲುವಿನಲ್ಲಿ ಸಂಸದ ಭಗವಂತ ಖೂಬಾ ಅವರ ಪಾತ್ರ ದೊಡ್ಡದು ಎಂಬುದು ಜಿಲ್ಲೆಯಾದ್ಯಂತ ಚರ್ಚೆಯಲ್ಲಿದೆ.

bidar
ಇಲ್ಲಿ 'ಪ್ರಭು' ಅಲ್ಲಿ 'ಭಗವಂತ'.. ಇಬ್ಬರಿಗೂ ಮಂತ್ರಿ ಭಾಗ್ಯ..

By

Published : Jul 7, 2021, 8:53 PM IST

Updated : Jul 8, 2021, 12:45 PM IST

ಬೀದರ್: ಅವರಿಬ್ಬರು ಬೀದರ್ ಜಿಲ್ಲೆಯ ರಾಜಕೀಯದಲ್ಲಿ ಹೊಸಬರು. ಒಂದು ರೀತಿಯಲ್ಲಿ ಬೀದರ್ ಬಿಜೆಪಿಯ ಜೋಡೆತ್ತುಗಳೆಂದರೆ ತಪ್ಪಾಗಲಾರದು. ಒಂದು ದಶಕದಲ್ಲೇ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡು‌, ರಾಜಕೀಯ ಮನೆತನದ ಬೆನ್ನೆಲುಬೇ ಇಲ್ಲದೆ ಕಡಿಮೆ ಅವಧಿಯಲ್ಲಿ ಇಬ್ಬರೂ ಮಂತ್ರಿಗಳಾದರು. ಒಬ್ಬರು ರಾಜ್ಯ ಸಂಪುಟಕ್ಕೆ ಸೇರಿದ್ದರೆ, ಮತ್ತೊಬ್ಬರು ಕೇಂದ್ರ ಸಂಪುಟದ ಖಾತೆಯನ್ನು ಹೆಗಲಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಹಾಗೂ ಸಂಸದ ಭಗವಂತ ಖೂಬಾ ಅವರ ಜೋಡಿ ನಡೆದುಕೊಂಡು ಬಂದ ದಾರಿ ರೋಚಕ. ಇಬ್ಬರೂ ಕೂಡ ಔರಾದ್‌ನವರು. ಜಿಲ್ಲಾ ರಾಜಕಾರಣದಲ್ಲಿ ಮೊದಲು ಗುರುತಿಸಿಕೊಂಡು, ರಾಜ್ಯ ರಾಜಕಾರಣ ಈಗ ಕೇಂದ್ರ.. ಹೀಗೆ ಎಲ್ಲಾ ಮೆಟ್ಟಿಲುಗಳನ್ನು ಯಶಸ್ವಿಯಾಗಿ ಹತ್ತಿದ್ದಾರೆ. ಇದೀಗ ಸಂಸದ ಭಗವಂತ ಖೂಬಾ ಅವರು ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಇಲ್ಲಿ 'ಪ್ರಭು' ಅಲ್ಲಿ 'ಭಗವಂತ'.. ಇಬ್ಬರಿಗೂ ಮಂತ್ರಿ ಭಾಗ್ಯ..

2008ರಲ್ಲಿ ಮುಂಬೈ ಮೂಲದ ಉದ್ಯಮಿಯಾಗಿದ್ದ ಪ್ರಭು ಚವ್ಹಾಣ ಅವರನ್ನು ಔರಾದ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಅವರ ಗೆಲುವಿಗೆ ಬೆನ್ನೆಲುಬಾಗಿ ನಿಂತಿದ್ದ ಭಗವಂತ ಖೂಬಾ ಅವರು ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಸಾಮಾನ್ಯ ಕಾರ್ಯಕರ್ತನಂತೆ ಕ್ಷೇತ್ರದ ಲೆಕ್ಕಾಚಾರ ಹಾಕಿಕೊಟ್ಟು ದಿಗ್ಗಜ ನಾಯಕರನ್ನು ಸೋಲಿಸಿ ಪ್ರಭು ಚವ್ಹಾಣ ಅವರ ಗೆಲುವಿಗೆ ಸಾಕ್ಷಿಯಾದರು. ಚವ್ಹಾಣ ಅವರ ಸತರ 3ನೇ ಬಾರಿ ಗೆಲುವಿನಲ್ಲಿ ಸಂಸದ ಭಗವಂತ ಖೂಬಾ ಅವರ ಪಾತ್ರ ದೊಡ್ಡದು ಎಂಬುದು ಜಿಲ್ಲೆಯಾದ್ಯಂತ ಚರ್ಚೆಯಲ್ಲಿರುವ ವಿಚಾರ.

ಅದರಂತೆ 2014 ಹಾಗೂ 2019ರ ಎರಡು ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ದಿ. ಧರಂಸಿಂಗ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಂತಹ ದಿಗ್ಗಜ ನಾಯಕರ ಎದುರಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಮಾಡಿದ ಕೆಲಸ ಸಾಕಷ್ಟಿದೆ.

ಇಬ್ಬರು ಹೊಸಬರು ಮಂತ್ರಿಯಾದ್ರು:

ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಏಳುಬೀಳುಗಳಿಂದ ಸಮಿಶ್ರ ಸರ್ಕಾರ ಪತನದ ನಂತರ ಅಸ್ತಿತ್ವಕ್ಕೆ ಬಂದ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಪ್ರಭು ಚವ್ಹಾಣ ಅವರು ಪಶು ಸಂಗೋಪನೆ ಖಾತೆ ಸಚಿವರಾದರು. ಅದರಂತೆ ಇಂದು ದೇಶದ ರಾಜಕೀಯ ಜಟಿಲವಾದರೂ, ಘಟಾನುಘಟಿ ನಾಯಕರ ರೇಸ್​​ನಲ್ಲಿ ಭಗವಂತ ಖೂಬಾ ಅವರು ಪ್ರಧಾನಿ ನರೇಂದ್ರ ಮೊದಿ ಅವರ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವುದು ವಿಶೇಷ.

ಇಲ್ಲಿ 'ಪ್ರಭು' ಅಲ್ಲಿ 'ಭಗವಂತ'.. ಇಬ್ಬರಿಗೂ ಮಂತ್ರಿ ಭಾಗ್ಯ..

ಇಬ್ಬರ ನಡುವೆ ಭಿನ್ನಾಭಿಪ್ರಾಯ :

ಸಚಿವ ಪ್ರಭು ಚವ್ಹಾಣ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರ ನಡುವೆ ಕಳೆದ ನಾಲ್ಕಾರು ವರ್ಷಗಳಿಂದ ಸಾಕಷ್ಟು ಭಿನ್ನಾಭಿಪ್ರಾಯ ಕಂಡುಬಂದಿತ್ತು. ಅದೆಷ್ಟೊ ಬಾರಿ ಪಕ್ಷದ ವೇದಿಕೆಯಲ್ಲೇ ಅಸಮಾಧಾನ ಬಯಲಾಗಿತ್ತು. ಆದರೂ ಪಕ್ಷದ ಕೆಲಸಗಳು ಬಂದಾಗ ಈ ಜೋಡೆತ್ತುಗಳು ಸಕ್ರಿಯವಾಗಿ ಕೆಲಸ ಮಾಡುತ್ತಲೇ ಇರುವುದರಿಂದ ಯಶಸ್ಸು ಇವರ ಬೆನ್ನತ್ತಿದೆ ಅಂತಾರೆ ಸಾರ್ವಜನಿಕರು.

ಇಬ್ಬರು ಒಂದೇ ತಾಲೂಕಿನವರು:

ಪ್ರಭು ಚವ್ಹಾಣ ಹಾಗೂ ಭಗವಂತ ಖೂಬಾ ಇಬ್ಬರು ನಾಯಕರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನವರು. ಔರಾದ್ ಪಟ್ಟಣದ ಬುಟ್ಟೆಗಲ್ಲಿ ನಿವಾಸಿ ಭಗವಂತ ಖೂಬಾ ಆದ್ರೆ, ಪ್ರಭು ಚವ್ಹಾಣ ಅವರು ಔರಾದ್ ತಾಲೂಕಿನ ಘಮಸುಬಾಯಿ ತಾಂಡದ ನಿವಾಸಿ. ಇಬ್ಬರು ನಾಯಕರು ಜಿಲ್ಲಾ ರಾಜಕಾರಣದಲ್ಲಿ ಅಂಬೆಗಾಲು ಹಾಕಿದ ನಂತರ ಸತತವಾಗಿ ಬೆಳೆಯುತ್ತಲೇ ಇರುವುದು ವಿಶೇಷ.

ಇದನ್ನೂ ಓದಿ:ಕಾರ್ಯಕರ್ತನಿಂದ-ಕೇಂದ್ರ ಸಚಿವನಾಗಿ ಭಗವಂತ ಖೂಬಾ ನಡೆದು ಬಂದ ದಾರಿ

Last Updated : Jul 8, 2021, 12:45 PM IST

ABOUT THE AUTHOR

...view details