ಬೀದರ್ :ಅಧಿಕಾರಿಗಳ ವಿರುದ್ಧ ಪದೇಪದೆ ಕೇಳಿ ಬರ್ತಿರುವ ಲಂಚಾವತಾರದ ಬಗ್ಗೆ ಪಶೋಸಂಗಾಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಕೆಂಡಕಾರಿದ್ದಾರೆ. ಲಂಚವತಾರದ ಬಗ್ಗೆ ಇನ್ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳೋದಾಗಿ ಅಧಿಕಾರಿಗಳಿಗೆ ಗುಡುಗಿದ್ದಾರೆ.
ಜಿಲ್ಲೆಯ ಔರಾದ್ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಲಂಚವತಾರದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಸಚಿವರು, ಜನರಿಗೆ ಅನಗತ್ಯ ಮೋಸ ಮಾಡಿ ಕಾಟ ಕೊಟ್ಟರೆ ಸುಮ್ಮನೆ ಇರಲ್ಲ ಅಂತಾ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಆದರೆ, ಸಭೆಯುದ್ಧಕ್ಕೂ ಬಹುತೇಕ ಹಿಂದಿಯಲ್ಲೇ ಸಚಿವರು ಮಾತಾಡ್ತಾಯಿದ್ರೇ, ಬಹುಪಾಲು ಅಧಿಕಾರಿಗಳು ಸಹ ಹಿಂದಿಯಲ್ಲಿ ಸಚಿವರಿಗೆ ಉತ್ತರ ಕೊಡ್ತಿದ್ದರು. ಅಪರೂಪಕ್ಕೊಮ್ಮೆ ನಡುವೆ ನಡುವೆ ಸಚಿವರು ಕನ್ನಡ ಪದಗಳನ್ನ ಬಳಸ್ತಿದ್ರೇ, ಅಧಿಕಾರಿಗಳ ಸಹ ಅಲ್ಲೊಬ್ಬ ಇಲ್ಲೊಬ್ಬರು ಕನ್ನಡದಲ್ಲಿ ಉತ್ತರ ನೀಡ್ತಿದ್ದರು.