ಬೀದರ್: ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ ಕಳೆದ ವರ್ಷ 30ನೇ ಸ್ಥಾನದಲ್ಲಿತ್ತು. ಈ ಬಾರಿ 18ನೇ ಸ್ಥಾನಕ್ಕೆ ಜಿಗಿದಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಈ ಫಲಿತಾಂಶ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಿಯುಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಬೀದರ್‌ಗೆ ಸಚಿವ ಪ್ರಭು ಚವ್ವಾಣ ಪ್ರಶಂಸೆ - ಬೀದರ್ ಸುದ್ದಿ
ಬೀದರ್ ನಗರದ ಶಾಹೀನ್ ಪಿಯು ಕಾಲೇಜಿನ ರಿತೇಜ್ ಮಹಮ್ಮದ್ ಅಕ್ಬರ್ ಪ್ರಥಮ, ಭಾಲ್ಕಿ ಗುರುಕುಲ ಪಿಯು ಕಾಲೇಜಿನ ಮಹೇಶ್ವರ ಸಂಗಯ್ಯ ಸ್ವಾಮಿ ದ್ವೀತಿಯ ಹಾಗೂ ಗುರುಕುಲ ಪಿಯು ಕಾಲೇಜಿನ ವೈಷ್ಣವಿ ವೀರಶೆಟ್ಟಿ ತೃತೀಯ ಸ್ಥಾನ ಗಳಿಸಿದ್ದಾರೆ.
ಪಿಯುಸಿ ಫಲಿತಾಂಶದಲ್ಲಿ 18ನೇ ಸ್ಥಾನಕ್ಕೆ ಜಿಗಿದ ಬೀದರ್..ಸಚಿವ ಪ್ರಭು ಚವ್ಹಾಣ ಪ್ರಶಂಸೆ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, ಬೀದರ್ ನಗರದ ಶಾಹೀನ್ ಪಿಯು ಕಾಲೇಜಿನ ರಿತೇಜ್ ಮಹಮ್ಮದ್ ಅಕ್ಬರ್ ಪ್ರಥಮ, ಭಾಲ್ಕಿ ಗುರುಕುಲ ಪಿಯು ಕಾಲೇಜಿನ ಮಹೇಶ್ವರ ಸಂಗಯ್ಯ ಸ್ವಾಮಿ ದ್ವೀತಿಯ ಹಾಗೂ ಗುರುಕುಲ ಪಿಯು ಕಾಲೇಜಿನ ವೈಷ್ಣವಿ ವೀರಶೆಟ್ಟಿ ತೃತೀಯ ಸ್ಥಾನ ಗಳಿಸಿದ್ದಾರೆ. ಈ ಸಾಧನೆ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ವಿಶೇಷ ಸನ್ಮಾನ ಮಾಡಲಾಗುವುದು ಎಂದರು.
ತಾಲೂಕು ಮಟ್ಟದಲ್ಲಿ ಗರಿಷ್ಠ ಸಾಧನೆಗೈದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.