ಕರ್ನಾಟಕ

karnataka

ETV Bharat / state

ಕೊರೊನಾ ಅಟ್ಟಹಾಸದ ನಡುವೆಯೂ ಸಹಜ ಸ್ಥಿತಿಯತ್ತ ಬೀದರ್ - ಸಹಜ ಸ್ಥಿತಿಯತ್ತ ಬೀದರ್

ಕೊರೊನಾ ಅಟ್ಟಹಾಸದ ನಡುವೆ ಬೀದರ್​ನಲ್ಲಿ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬೀದಿ ಬದಿ ವ್ಯಾಪಾರ, ಅಂಗಡಿ ಮುಂಗಟ್ಟು, ವ್ಯವಹಾರ, ಸಾರಿಗೆ ಸಂಚಾರ ಕ್ರಮೇಣವಾಗಿ ಆರಂಭವಾಗುತ್ತಿದೆ.

Bidar is back to normal
ಕೊರೊನಾ ಅಟ್ಟಹಾಸ ನಡುವೆ ಸಹಜ ಸ್ಥಿತಿಯತ್ತ ಬೀದರ್ ..

By

Published : Jul 30, 2020, 9:25 AM IST

ಬೀದರ್: ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಡುವೆ ಕಳೆದ 4 ತಿಂಗಳಿಂದ ಮನೆಯಲ್ಲಿಯೇ ಇದ್ದ ಜನರು ಇದೀಗ ನಿಧಾನವಾಗಿ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿದ್ದಾರೆ.

ಸಹಜ ಸ್ಥಿತಿಯತ್ತ ಮರಳುತ್ತಿರುವ ಬೀದರ್

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,938ಕ್ಕೆ ಏರಿಕೆಯಾಗಿದ್ದು, 73 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಮೊದಲ ಹಂತದಲ್ಲಿ ಭಾರಿ ಭೀತಿ ಮೂಡಿಸಿದೆ. ಕೊರೊನಾ ಸೋಂಕು ಈಗ ಸಮುದಾಯ ಹಂತಕ್ಕೆ ಹರಡುವ ಸಾಧ್ಯತೆಗಳಿವೆ ಎಂಬ ಎಚ್ಚರಿಕೆ ಒದೆ. ಇಷ್ಟಿದ್ದರೂ ಜನರಲ್ಲಿ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ.

ಬೀದಿ ಬದಿ ವ್ಯಾಪಾರ, ಅಂಗಡಿ ಮುಂಗಟ್ಟು, ವ್ಯವಹಾರ, ಸಾರಿಗೆ ಸಂಚಾರ ಕ್ರಮೇಣವಾಗಿ ಆರಂಭವಾಗಿದೆ. ಇದು ಜನರಲ್ಲಿ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ABOUT THE AUTHOR

...view details