ಕರ್ನಾಟಕ

karnataka

ETV Bharat / state

ಬೀದರ್: ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಸನ್ಮಾನ - ವಿದ್ಯಾರ್ಥಿ ಅಭಿಷೇಕ ಸೂರ್ಯವಂಶಿಗೆ ಸನ್ಮಾನ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗಕ್ಕೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಅಭಿಷೇಕ ಸಂಜುಕುಮಾರ ಸೂರ್ಯವಂಶಿ ಅವರನ್ನು ಸನ್ಮಾನಿಸಲಾಯಿತು.

Honour to student
Honour to student

By

Published : Aug 8, 2020, 11:10 PM IST

ಬಸವಕಲ್ಯಾಣ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಾಲೂಕಿನ ಸಸ್ತಾಪೂರ ಗ್ರಾಮದ ವಿದ್ಯಾರ್ಥಿ ಅಭಿಷೇಕ ಸಂಜುಕುಮಾರ ಸೂರ್ಯವಂಶಿ ಅವರನ್ನು ಹತ್ಯಾಳನಲ್ಲಿ ಶರಣ ಬಹುಉದ್ದೇಶಿ ಸೇವಾಭಾವಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಎಸ್.ಎಸ್.ಕೆ.ಬಿ ಕಾಲೇಜಿನ ಕಲಾ ವಿಭಾಗದಲ್ಲಿ ಶೇ. 95.83ರಷ್ಟು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಅಭಿಷೇಕ ಸೂರ್ಯವಂಶಿಯನ್ನು ಶರಣ ಬಹುಉದ್ದೇಶಿ ಸೇವಾಭಾವಿ ಸಂಸ್ಥೆಯ ಪೂಜ್ಯ ಭಂತೆ ಧಮ್ಮನಾಗ ಅವರು ಸನ್ಮಾನಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಬಿ.ನಾರಾಯಣರಾವ ಮಾತನಾಡಿ, ಕಠಿಣ ಪರಿಶ್ರಮದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರಯತ್ನ ಹೀಗೆ ಮುಂದುವರೆಸಬೇಕು. ಐಎಎಸ್ ನಂತಹ ಉನ್ನತ ಸ್ಥಾನದ ಗುರಿ ಹೊಂದಿ ಈಗಿನಿಂದಲೇ ಪರಿಶ್ರಮ ಪಟ್ಟರೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎಂದು ಸಲಹೆ ನೀಡಿದರು.

ಶೈಕ್ಷಣಿಕ ಪ್ರಗತಿಯಲ್ಲಿ ಸರ್ವಾಂಗೀಣ ಪ್ರಗತಿ ಅಡಗಿದೆ. ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡಿಸಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡಬೇಕು. ತಾಲೂಕಿನಲ್ಲಿ ಶಿಕ್ಷಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೇತ್ರೆ, ಮುಖಂಡರಾದ ಮನೋಹರ್ ಮೈಸೆ, ಮನೋಹರ್ ಮೋರೆ, ಉಪನ್ಯಾಸಕ ನಿತ್ಯಾನಂದ ಮಂಠಾಳಕರ್, ರಜನಿಕಾಂತ ಸಿಂಧೆ, ಶರಣು ಆಲಗೂಡ, ಸಂಜುಕುಮಾರ ನಡುಕರ್ ಇತರೆ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಅಭಿಷೇಕ ಅವರಿಗೆ ಶಾಸಕ ಬಿ.ನಾರಾಯಣರಾವ ಸನ್ಮಾನಿಸಿ, ಪ್ರೋತ್ಸಾಹಿಸಿದರು.

ABOUT THE AUTHOR

...view details