ಬೀದರ್:ಕೊರೊನಾ ವೈರಸ್ ಸೊಂಕು 11 ಜನರಲ್ಲಿ ಪತ್ತೆಯಾಗುತ್ತಿದ್ದಂತೆ ಜನರಲ್ಲಿ ಆತಂಕ ಇನ್ನೂ ಹೆಚ್ಚಾಗಿದೆ. ರಸ್ತೆಗಳು ಖಾಲಿ ಖಾಲಿಯಾಗಿವೆ. ಯಾರೂ ಕೂಡ ಮನೆಯಿಂದ ಹೊರಗೆ ಬರುತ್ತಿಲ್ಲ.
11 ಜನರಲ್ಲಿ ಕೊರೊನಾ: ಎರಡನೇ ದಿನವೂ ಬೀದರ್ನಲ್ಲಿ ಕಟ್ಟೆಚ್ಚರ - bidar lackdown news
ಜಿಲ್ಲಾಡಳಿತ ಸೋಂಕು ಪೀಡಿತ ಮೂರು ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿತ್ತು. ಎರಡನೇ ದಿನವಾದ ಶನಿವಾರ ಬೀದರ್ ನಗರದ ಒಲ್ಡ್ ಸಿಟಿ, ಬಸವಕಲ್ಯಾಣ ಹಾಗೂ ಮನ್ನಾಖೇಳ್ಳಿ ಗ್ರಾಮದಲ್ಲಿ ಜನರನ್ನು ಮನೆಯಿಂದ ಹೊರ ಬರದಂತೆ ಪೊಲೀಸರೇ ಎಚ್ಚರಿಕೆ ನೀಡಿದ್ದರು.

ಬೀದರ್ ರಸ್ತೆಗಳೂ ಖಾಲಿ ಖಾಲಿ
ಜಿಲ್ಲಾಡಳಿತ ಸೋಂಕು ಪೀಡಿತ ಮೂರು ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿತ್ತು. ಎರಡನೇ ದಿನವಾದ ಶನಿವಾರ ಬೀದರ್ ನಗರದ ಒಲ್ಡ್ ಸಿಟಿ, ಬಸವಕಲ್ಯಾಣ ಹಾಗೂ ಮನ್ನಾಖೇಳ್ಳಿ ಗ್ರಾಮದಲ್ಲಿ ಜನರನ್ನು ಮನೆಯಿಂದ ಹೊರ ಬರದಂತೆ ಪೊಲೀಸರೇ ಎಚ್ಚರಿಕೆ ನೀಡಿದ್ದರು.
ಪ್ರತಿಯೊಂದು ಮನೆಯಲ್ಲೂ 40 ತಂಡಗಳ ಮೂಲಕ ಸ್ಕ್ರೀನಿಂಗ್ ಮಾಡಿ 82 ಜನರನ್ನು ಹೊಂ ಕ್ವಾರಂಟೈನ್ನಲ್ಲಿಡಲಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು, ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಮುಂದಿನ 14 ದಿನಗಳ ಕಾಲ ಇದೇ ಸ್ಥಿತಿ ಮುಂದುವರೆಯಲಿದೆ.