ಬೀದರ್:ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಂಪೂರ್ಣ ಲಾಭ ಪಡೆದ ರಾಜ್ಯದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಬೀದರ್ ಜಿಲ್ಲೆ ಪಾತ್ರವಾಗಿದೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ರೈತರು ಈ ಯೋಜನೆಯ ಬೆಳೆ ವಿಮೆ ಮಾಡಿಸಿ ದಾಖಲೆ ನಿರ್ಮಿಸಿದ್ದಾರೆ.
ಫಸಲ್ ಭೀಮಾ ಯೋಜನೆ : ಪರಿಹಾರ ಪಡೆಯುವಲ್ಲಿ ಬೀದರ್ ಜಿಲ್ಲೆಗೆ ನಂಬರ್ ಒನ್ ಸ್ಥಾನ - ಫಸಲ್ ಭೀಮಾ ಯೋಜನೆ
ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಪರಿಹಾರ ಹಣ ಪಡೆಯುವಲ್ಲಿ ಕರ್ನಾಟಕದಲ್ಲಿ ಬೀದರ್ ಜಿಲ್ಲೆ ನಂಬರ್ ಒನ್ ಸ್ಥಾನ ಗಿಟ್ಟಿಸಿದೆ. ಕಳೆದ ಮೂರು ವರ್ಷದಲ್ಲಿ 300 ಕೋಟಿಗೂ ಅಧಿಕ ಪರಿಹಾರ ಪಡೆದಿದ್ದಾರೆ.
ಜಿಲ್ಲೆಯ ರೈತರು ಕಳೆದ ಮೂರು ವರ್ಷದಲ್ಲಿ 300 ಕೋಟಿಗೂ ಅಧಿಕ ಪರಿಹಾರ ಪಡೆದಿದ್ದಾರೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು 2,13,153 ರೈತರು ನೋಂದಣಿ ಮಾಡಿಸಿದ್ದಾರೆ. ಔರಾದ್ ತಾಲೂಕಿನಲ್ಲಿ 63,000 ರೈತರು, ಬಸವಕಲ್ಯಾಣ ತಾಲೂಕಿನಲ್ಲಿ 45,063 ಸಾವಿರ ರೈತರು, ಭಾಲ್ಕಿ ತಾಲೂಕಿನ 52,344 ಸಾವಿರ ರೈತರು, ಹುಮನಾಬಾದ್ ತಾಲೂಕಿನ 24,970 ಸಾವರ ರೈತರು, ಬೀದರ್ ತಾಲೂಕಿನ 21,171 ಸಾವಿರ ರೈತರು, ಚಿಟಗುಪ್ಪಾ ತಾಲೂಕಿನ 2965 ಸಾವಿರ ರೈತರು, ಹುಲಸೂರು ತಾಲೂಕಿನ 1800 ಸಾವಿರ ರೈತರು ಇನ್ನೂ ಕಮಲನಗರ ತಾಲೂಕಿನ 1775 ಸಾವಿರ ರೈತರ ಫಸಲ್ ಭೀಮಾ ಯೋಜನೆ( PMFBY)ಯಡಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ 'ಯುನಿವರ್ಸಲ್ ಸೋಂಪೊ ಜನರಲ್ ಇನ್ಸುರೆನ್ಸ್' ಕಂಪನಿಯವರು ಬೆಳೆ ನಷ್ಟವಾದರೆ ಪರಿಹಾರ ಕೊಡಲಿದ್ದಾರೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಬೆಳೆ ಹಾನಿಯಾಗಿ ಸಂಕಷ್ಟವನ್ನು ಎದುರಿಸುತ್ತಿರುವ ರೈತ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬುವ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿ ಎಕರೆಗೆ 20 ಸಾವಿರ ರೂಪಾಯಿ ಬೆಳೆ ವಿಮೆ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿ ರೈತನ್ನ ಸಂಕಷ್ಟದಿಂದ ಪಾರು ಮಾಡುವಲ್ಲಿ ವರವಾಗಿದೆ.