ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಚುನಾವಣೆ ಅಖಾಡ ರಂಗೇರಿದ್ದು, ಗಡಿ ಜಿಲ್ಲೆ ಬೀದರ್ನಲ್ಲಿ ಜಿದ್ದಾ ಜಿದ್ದಿ ಪ್ರಾರಂಭವಾಗಿದೆ.
ಭಾನುವಾರ(ನಾಳೆ) ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯಲಿದ್ದು, ಚುನಾವಣಾ ಕಣದಲ್ಲಿ ನಿಕಟಪೂರ್ವ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಜೊತೆಗೆ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ರಾಜಕುಮಾರ್ ಹೆಬ್ಬಾಳೆ, ಕರುನಾಡು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಂಜೀವಕುಮಾರ್ ಅತಿವಾಳೆ ಹಾಗೂ ಸಿದ್ದಲಿಂಗಯ್ಯ ಬಂಕಲಗಿ ಕಣದಲ್ಲಿದ್ದಾರೆ.
ಇದನ್ನೂ ಓದಿ:Teltumbde's Death: ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆಂದ ನಕ್ಸಲರು: ನ.27ರಂದು ಬಂದ್‌ಗೆ ಕರೆ
ಕಳೆದ ಎರಡು ವಾರಗಳಿಂದ ಜಿಲ್ಲೆಯಾದ್ಯಂತ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳ ಪೈಕಿ, ಮೂವರು ಸಾಕಷ್ಟು ಪ್ರಭಾವಶಾಲಿಗಳಾಗಿದ್ದು ಕನ್ನಡ ನಾಡು, ನುಡಿಯ ವಿಚಾರದಲ್ಲಿ ಹಲವಾರು ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಬೀದರ್ ಪರಿಷತ್ ಚುನಾವಣೆ ತ್ರೀಕೊನ ಸ್ಪರ್ಧೆ ಏರ್ಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು 12,837 ಜನರು ಜಿಲ್ಲಾ ಹಾಗೂ ರಾಜ್ಯ ಅಧ್ಯಕ್ಷರ ಸ್ಥಾನಗಳಿಗೆ ಪ್ರತ್ಯೇಕ ಮತ ಚಲಾವಣೆ ಮಾಡಲಿದ್ದಾರೆ. ಬೀದರ್ ತಾಲೂಕಿನಲ್ಲಿ 6,023 ಮತದಾರರಿದ್ದಾರೆ. ಭಾಲ್ಕಿ ತಾಲೂಕಿಲ್ಲಿ 1849, ಬಸವಕಲ್ಯಾಣ ತಾಲೂಕಿನಲ್ಲಿ 1249, ಔರಾದ್ 1203, ಹುಮನಾಬಾದ್ 1049, ಕಮಲನಗರ 681, ಚಿಟಗುಪ್ಪ 461 ಹಾಗೂ ಹುಲಸೂರು ತಾಲೂಕಿಲ್ಲಿ 322 ಜನ ಮತದಾರರು ಆಯಾ ತಾಲೂಕು ತಹಶೀಲ್ದಾರ್ ಕಚೇರಿಗಳ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡರ ಮಕ್ಕಳಿಗೆ ಶ್ರೀಕಿ ಡ್ರಗ್ಸ್ ತಂದು ಕೊಡುತ್ತಿದ್ದ: ಆರಗ ಜ್ಞಾನೇಂದ್ರ ಆರೋಪ