ಬೀದರ್: ದೆಹಲಿಯಲ್ಲಿ ಜಮಾತ್ ಸಮಾವೇಶದಲ್ಲಿ ಭಾಗಿಯಾಗಿದ್ದ ಬೀದರ್ನ 26 ಜನರನ್ನು ಗುರುತಿಸಿ ಅವರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಹೆಚ್ ಆರ್ ಮಹದೇವ ಸ್ಪಷ್ಟಪಡಿಸಿದ್ದಾರೆ.
ಬೀದರ್ನಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪಾಸಿಟಿವ್ ಇಲ್ಲ.. - ಬೀದರ್ನಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ
ಇದೀಗ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರು ಜಾಸ್ತಿಯಾದ ಹಿನ್ನೆಲೆ ದೆಹಲಿಗೆ ಹೋಗಿ ಬಂದ 26 ಜನರ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ 1ರಂದು 26 ಜನ ಬೀದರ್ನಿಂದ ದೆಹಲಿಗೆ ಹೋಗಿದ್ದರು. ಅವರು ವಾಪಸ್ ಬೀದರ್ಗೆ ಬಂದಾಗಲೇ ಅವರೆಲ್ಲರ ತಪಾಸಣೆ ಮಾಡಲಾಗಿದೆ. ಸ್ಯಾಂಪಲ್ ತೆಗೆದು ಕಲಬುರ್ಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಈ ಪೈಕಿ ಮಜುರುದ್ದೀನ್ ಎಂಬುವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅವರ ಕಫ ಹಾಗೂ ರಕ್ತದ ಮಾದರಿ ಎರಡು ಬಾರಿ ಪರಿಶೀಲನೆ ಮಾಡಿದಾಗಲೂ ನೆಗೆಟಿವ್ ವರದಿ ಬಂದಿದೆ ಎಂದು ಹೇಳಿದರು. ಇದೀಗ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರು ಜಾಸ್ತಿಯಾದ ಹಿನ್ನೆಲೆ ದೆಹಲಿಗೆ ಹೋಗಿ ಬಂದ 26 ಜನರ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಸ್ಪಷ್ಟನೆ ಸಿಗಲಿದೆ. ಅಲ್ಲಿವರೆಗೆ ಯಾವುದನ್ನೂ ಹೇಳಲು ಆಗಲ್ಲ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ವೈರಸ್ ಸೋಂಕು ಪೀಡಿತರಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
TAGGED:
corona cases in bidar